
ಕೋಟ: ಇಲ್ಲಿನ ಕೋಟದ ದಾನಗುಂದು ಮಲಸಾವರಿ ಸಪರಿವಾರ ದೈವಸ್ಥಾನದಲ್ಲಿ ಹಂದಟ್ಟು ಮಹಿಳಾ ಬಳಗದ ಆಶ್ರಯದಲ್ಲಿ ನವರಾತ್ರಿಯ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಇವರ ನೇತೃತ್ವದಲ್ಲಿ ಪೂಜಾ ವಿಧಿಗಳು ನಡೆದವು.
ಗ್ರಾಮದ ಗ್ರಾಮಸ್ಥರು ವಿಶೇಷ ಪ್ರಾರ್ಥನೆ ಸಲ್ಲಿಸಿದರಲ್ಲದೆ ಬಳಗದ ವತಿಯಿಂದ ಅನ್ನಪ್ರಸಾದ ವಿತರಣೆ ನಡೆಯಿತು.
ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಯಶೋದ ಹಂದಟ್ಟು, ಮಾಜಿ ಅಧ್ಯಕ್ಷೆ ರತ್ನಾ ಪೂಜಾರಿ, ಸ್ಥಾಪಕಾಧ್ಯಕ್ಷೆ ಪುಷ್ಭಾ ಹಂದಟ್ಟು, ಪoಚವರ್ಣ ಮಹಿಳ ಮಂಡಲದ ಸಂಚಾಕಿ ಸುಜಾತ ಬಾಯರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಕಾರ್ಯದರ್ಶಿ ಪುಷ್ಭ, ಗೌರವಾಧ್ಯಕ್ಷೆ ಜಲಜ ಶಂಕರ್, ಉಪಾಧ್ಯಕ್ಷೆ ಸರಸ್ವತಿ, ಪ್ರೇಮ ಆನಂದ್, ವಸಂತಿ, ಗೀತಾ, ಭಾರತಿ, ಪoಚಾಯತ್ ಸದಸ್ಯರಾದ ಪ್ರಕಾಶ್, ಪೂಜಾ ಮತ್ತಿತರರು ಇದ್ದರು. ಗೆಳೆಯರ ಬಳಗ ಯುವಕ ಮಂಡಲ ದಾನಗುಂದು ಹಂದಟ್ಟು ಸಹಕಾರ ನೀಡಿತು.
ಗಮನ ಸೆಳೆದ ರಂಗೋಲಿ ಚಿತ್ರ
ದೈವಸ್ಥಾನದಲ್ಲಿ ವಿಜಯದಶಮಿಯ ಅಂಗವಾಗಿ ಹಂದಟ್ಟು ಮಹಿಳಾ ಬಳಗದ ಸದಸ್ಯೆ ಚಿತ್ರಕಲಾವಿದೆ ಸುಶ್ಮಿತಾ ಪೂಜಾರಿ ರಂಗೋಲಿಯ ಮೂಲಕ ಬೃಹತ್ ಗಾತ್ರದ ಮಲಸಾವರಿ ಅಮ್ಮನ ಚಿತ್ರ ವಿಶೇಷವಾಗಿ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಸುಶ್ಮಿತಾ ಅವರನ್ನು ಮಹಿಳಾ ಬಳಗದ ವತಿಯಿಂದ ಗೌರವಿಸಲಾಯಿತು.
ಕೋಟದ ದಾನಗುಂದು ಮಲಸಾವರಿ ಸಪರಿವಾರ ದೈವಸ್ಥಾನದಲ್ಲಿ ಹಂದಟ್ಟು ಮಹಿಳಾ ಬಳಗದ ಆಶ್ರಯದಲ್ಲಿ ನವರಾತ್ರಿಯ ವಿಜಯದಶಮಿ ಅಂಗವಾಗಿ ಚಿತ್ರಕಲಾವಿದೆ ಸುಶ್ಮಿತಾ ಅವರನ್ನು ಮಹಿಳಾ ಬಳಗದ ವತಿಯಿಂದ ಗೌರವಿಸಲಾಯಿತು. ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಯಶೋದ ಹಂದಟ್ಟು,ಮಾಜಿಅಧ್ಯಕ್ಷೆ ರತ್ನಾ ಪೂಜಾರಿ, ಸ್ಥಾಪಕಾಧ್ಯಕ್ಷೆ ಪುಷ್ಭಾ ಹಂದಟ್ಟು, ಪoಚವರ್ಣ ಮಹಿಳ ಮಂಡಲದ ಸಂಚಾಲಕಿ ಸುಜಾತ ಬಾಯರಿ ಇದ್ದರು.
Leave a Reply