Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಾಜ್ಯ ಸಂಚಾಲಕರಾಗಿ ಶಾಮ ಘಾಟಗೆ ಆಯ್ಕೆ

ಸಾವಳಗಿ: ಬೆಂಗಳೂರು ನಗರದ ಜೈ ಭೀಮ್ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಸಭೆಯಲ್ಲಿ ಜಮಖಂಡಿ ನಗರದ ಶಾಮರಾವ ಘಾಟಗೆ ಅವರನ್ನು ನೂತನ ರಾಜ್ಯ ಸಂಚಾಲಕರಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.

ದಿ.ಲಕ್ಷ್ಮೀನಾರಾಯಣ ನಾಗ್ವಾರ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅನುಭವಿ ಹೋರಾಟಗಾರ ಶಾಮರಾವ ಘಾಟಗೆ ಅವರನ್ನು ನೇಮಕ ಮಾಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಅಗಲಿದ ಧೀಮಂತ ನಾಯಕ ಹುಟ್ಟು ಹೋರಾಟಗಾರ ದಿವಂಗತ ಲಕ್ಷ್ಮೀನಾರಾಯಣ ನಾಗವಾರ ಹಾಗೂ ದಲಿತ ಮುಖಂಡ ದೇವೇಂದ್ರ ಹೆಗಡೆ ಅವರ ನಿಧನಕ್ಕಾಗಿ ಸಭೆಯು ಒಂದು ನಿಮಿಷ ಮೌನ ಆಚರಿಸಿ ನಂತರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಮಾತಾಡಿದ  ನೂತನ ರಾಜ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದ  ಶಾಮ ಘಾಟಗೆ ರಾಜ್ಯದಲ್ಲಿ ದಲಿತರು ಹಾಗೂ ದಲಿತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು ಅದರ ವಿರುದ್ಧ ಸೂಕ್ತವಾದ ಪ್ರತಿಭಟನೆಯನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗುವುದು ದಲಿತ ವಿದ್ಯಾರ್ಥಿಗಳ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಪ್ರತಿಭಟನೆ ಮುಖಾಂತರ ಸರ್ಕಾರದ ಗಮನ ಸೆಳೆಯಲಾಗುವುದು ಮುಂಬರುವ ದಿನಗಳಲ್ಲಿ ವಿಚಾರ ಸಂಕಿರಣ ಹಾಗೂ ಅಧ್ಯಯನ ಶಿಬಿರಗಳ ಮುಖಾಂತರ ದಲಿತ ಯುವಕರಲ್ಲಿ ಜಾಗೃತಿ ಮೂಡಿಸಲಾಗುವುದು ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ಕೊಟ್ಟು ಸಂಘಟನೆಯನ್ನು ಬಲಿಷ್ಠ ಗೊಳಿಸಲು ರಾಜ್ಯದ ಎಲ್ಲಾ ಪದಾಧಿಕಾರಿಗಳೊಂದಿಗೆ ಸಂಚರಿಸಿ ಚಳುವಳಿಯನ್ನು ಗಟ್ಟಿಗೊಳಿಸಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ದಲಿತ ನಾಯಕ ಬಿ. ಬಸವರಾಜ್ ಮತ್ತು ಜನದನಿ ಪತ್ರಿಕೆಯ ಹಿರಿಯ ಸಂಪಾದಕ ಹಾಗೂ ವಿಚಾರವಾದಿಗಳಾದ ಎಮ್ ರಾಮಯ್ಯ.ರಾಜ್ಯ ಸಂಘಟನಾ ಸಂಚಾಲಕರಾದ ಕೆಂಪಣ್ಣ ಸಾಗ್ಯ ವೆಂಕಟೇಶಮೂರ್ತಿ ಆನೇಕಲ್ ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶೋಭಾ ಕಟ್ಟಿಮನಿ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಗೌರಮ್ಮ ದೊಡಮನಿ ವೈ ಕೆ ಗುಡ್ಡಮ್ಮನವರ ಬಸಮ್ಮ ಕಾಳೆ. ಪ್ರಮೀಳಾ ಕೊಡಗು ಜಯಶ್ರೀ ಕಾಂಬಳೆ ಶ್ರೀಮತಿ ಶೋಭಾ ಮಂಡ್ಯಾ. ಹಾಗೂ ರಾಹುತ ತಳಕೇರಿ ಅವರನ್ನು ದಲಿತ ಕಲಾ ಮಂಡಳಿಗೆ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು.  ರಾಜ್ಯ ಸಂಘಟನಾ ಸಂಚಾಲಕರಾಗಿ ಕೆಂಪಣ್ಣ ಸಾಗ್ಯ ಚಂದ್ರು ಚಕ್ರವರ್ತಿ ವೆಂಕಟೇಶ್ ಮೂರ್ತಿ ಆನೇಕಲ್ ಪ್ರಕಾಶ್ ಕೆಲ್ಲೂರ ಪ್ರಭು ಮೇಗಳಮನಿ.ಹಾಗೂ ರಾಜ್ಯ ಖಜಾಂಚಿ ರಾಮಸ್ವಾಮಿ ಗುಟ್ಟೆ.ಕಾರ್ಯಕಾರಿ ಸಮಿತಿ ಸದಸ್ಯರು ಬಿ. ಬಸವರಾಜ್ ಯು. ರಾಮಯ್ಯ ತುಮಕೂರು. ಮೈಸೂರು ವಿಭಾಗೀಯ ಸಂಚಾಲಕ ಆನಂದ ಬೆಳ್ಳಾರಿ ಸಂಘಟನಾ ಸಂಚಾಲಕರು ವೀರೇಂದ್ರ ಕೊಡಗು. ರಮಾನಂದ್ ತಳಕೇರಿ. ಹಾಗೂ ಬೆಳಗಾವಿ ವಿಭಾಗೀಯ ಸಂಚಾಲಕ ರಮೇಶ್ ಸಣ್ಣಕ್ಕಿ ಸಂಘಟನಾ ಸಂಚಾಲಕರು ದೇವೇಂದ್ರ ಹಾದಿಮನಿ ಹನಮಂತ ಚಿಮ್ಮಲಗಿ ಮತ್ತು ತೌಶಿಪ್ ಅಹಮದ್ ದೇಸಾಯಿ (ಅಲ್ಪಸಂಖ್ಯಾತ ವಿಭಾಗ) ಹೀಗೆ ಇವರೆಲ್ಲರನ್ನು ಸಭೆಯಲ್ಲಿ ನೂತನವಾಗಿ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ದಲಿತ ಕಲಾ ಮಂಡಳಿ ಆನೇಕಲ್ ಇವರಿಂದ ಕ್ರಾಂತಿ ಗೀತೆಗಳನ್ನು ಹಾಡಿಸಲಾಯಿತು. ಕಾರ್ಯಕ್ರಮದ ನಿರೂಪಣೆ ವಿಜಯಪುರ ಜಿಲ್ಲಾ ಸಂಚಾಲಕರಾದ ಚಂದ್ರಕಾಂತ ಸಿಂಗೆ ನೆರವೇರಿಸಿದರು. ಕಾರ್ಯಕ್ರಮದ ಸ್ವಾಗತ ಕಲ್ಬುರ್ಗಿ ವಿಭಾಗೀಯ ಸಂಚಾಲಕರಾದ ಚಂದ್ರು ಚಕ್ರವರ್ತಿ ನಡೆಸಿಕೊಟ್ಟರು

ಇದೇ ವೇಳೆ ಕಲ್ಬುರ್ಗಿ ವಿಭಾಗಿಯ ಸಂಚಾಲಕರಾದ ಚಂದ್ರು ಚಕ್ರವರ್ತಿ ಪ್ರಭು ಮೇಗಳಮನಿ ರಾವುತ್ ತಳಕೇರಿ ಹಾಗೂ ದೇವೇಂದ್ರ ಹಾದಿಮನಿ, ರಾಜ್ಯದ ಎಲ್ಲಾ ಜಿಲ್ಲಾ ಸಂಚಾಲಕರು ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಪದಾಧಿಕಾರಿಗಳು ಮತ್ತು ದಲಿತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *