
ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಚಿಕ್ಕಪಡಸಲಗಿ ಗ್ರಾಮದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿಯಲ್ಲಿ 2006-2007ನೇ ಸಾಲಿನ ಎಸ್, ಎಸ್, ಎಲ್, ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ.
ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ ಎನ್ನುತ್ತದೆ. ನಮ್ಮ ಸಂಸ್ಕೃತಿ ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರೀದ್ದಾಪೂರ್ವಕ ನಂಬಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗುರು – ಶಿಷ್ಯರು ಸಂಬಂಧ ಹೇಗೆಲ್ಲ ಇರಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಹಳೆ ವಿದ್ಯಾರ್ಥಿಗಳು ತೋರಿಸಿಕೊಟ್ಟರು, ಸುಮಾರು 4 ಗಂಟೆಗಳಿಗೂ ಹೆಚ್ಚು ಸಮಯ ನಡೆದ ಗುರುವಂದನಾ ಕಾರ್ಯಕ್ರಮ ತಮಗೆ ಪಾಠ ಕಲಿಸಿದ ಪ್ರೌಢಶಾಲಾ ಗುರುಗಳನ್ನು ವೇದಿಕೆಗೆ ಕರೆತಂದು ಸನ್ಮಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮ ಹಳೇ ವಿದ್ಯಾರ್ಥಿಗಳ ಸವ್ಯಗಮಕ್ಕೂ ಸಾಕ್ಷಿಯಾಗಿತ್ತು, ಈ ಕಾರ್ಯಕ್ರಮ.
ದಿವ್ಯ ಸಾನಿಧ್ಯ ಪ.ಪೂ. ವೀರಬಸವ ದೇವರು ಹಿರೇಮಠ ಆಸಂಗಿˌ ಡಾ|| ಎ. ಜೆ. ನ್ಯಾಮಗೌಡ ಅಧ್ಯಕ್ಷರು ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿ, ಉದ್ಘಾಟಕರಾದ ಶ್ರೀ ಪಿ. ಬಿ. ದಾನಗೌಡ ಉಪಾಧ್ಯಕ್ಷರು ಸ್ಥಾನಿಕ ಆಡಳಿತ ಮಂಡಳಿ ಶಿ,ಹ, ಸ್ಮಾ, ಪ್ರೌಢ ಶಾಲೆ ಚಿಕ್ಕಪಡಸಲಗಿ, ಮುಖ್ಯ ಅತಿಥಿಗಳಾದ ಶ್ರೀ ಪಿ. ಎಮ್. ಪಾಟೀಲ ನಿವೃತ್ತ ಮುಖ್ಯ ಪಾಧ್ಯಾಯರು, ಬಿ. ಎಲ್. ಜಾಲೋಜಿ ಪ್ರಭಾರ ಮುಖ್ಯ ಪಾಧ್ಯಾಯರು, ಈ ಕಾರ್ಯಕ್ರಮ ಭಾಗವಹಿಸಿದ್ದರು.
Leave a Reply