
ಕೋಟ: ಹೊಸದಿಗಂತ ದಿನಪತ್ರಿಕೆ ಮತ್ತು ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಸಂಯುಕ್ತ ಅಶ್ರಯದಲ್ಲಿ ಕಾವ್ಯ ಸಿಂಧು ಕಡಲತಡಿಯಲ್ಲ ಕವಿ ಸಮ್ಮಿಲನ ಸಾಲಿಗ್ರಾಮದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹಬೌದ್ಧಿಕ ಪ್ರಮುಖ್ ಸುಧೀರ್ ಕವಿ ಸಮ್ಮಿಲನ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ಕವಿತಾ ರಚನೆಯಲ್ಲಿ ಸಾಮಾಜಿಕ ಕಳಕಳಿ ಇರಬೇಕು. ಗೀತೆಗಳು ದೇಶ, ಸಮಾಜ, ಧರ್ಮದ ಬಗ್ಗೆ ಭಾವ ಜಾಗರಣ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಬಿಚ್ಚಿಟ್ಟರು.
ದಿನವಿಡಿ ನಡೆದ ಕವಿತಾ ರಚನೆಯಲ್ಲಿ ಸಮಷ್ಟಿ ಚಿಂತನೆ: ಅಂದು- ಇಂದು ಮತ್ತು ಕವಿತಾ ವಾಚನದಲ್ಲಿ ತತ್ವಾಭಿವ್ಯಕ್ತಿ ಮತ್ತು ರಸಾಭಿವ್ಯಕ್ತಿ – ಈ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆದವು. ರಾಜ್ಯದ ವಿವಿಧ ಕಡೆಗಳಿಂದ 70 ಕವಿಗಳು ಪಾಲ್ಗೊಂಡಿದ್ದರು. 63 ಕವಿಗಳು ತಾವು ರಚಿಸಿದ ಕವನಗಳನ್ನು ವಾಚಿಸಿದರು.
ಡಾ ಶಿವರಾಮ ಕಾರಂತರ ಸಂಸ್ಮರಣೆ ಕೂಡಾ ಈ ಸಂದರ್ಭದಲ್ಲಿ ನಡೆಯಿತು. ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ ಎಸ್ , ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಬಿ ಎಂ ಗುರುರಾಜ್ ರಾವ್ ಉಪಸ್ಥಿತರಿದ್ದರು.
ಹೊಸದಿಗಂತ ದಿನಪತ್ರಿಕೆ ಮತ್ತು ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಸಂಯುಕ್ತ ಅಶ್ರಯದಲ್ಲಿ ಕಾವ್ಯ ಸಿಂಧು ಕಡಲತಡಿಯಲ್ಲ ಕವಿ ಸಮ್ಮಿಲನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹಬೌದ್ಧಿಕ ಪ್ರಮುಖ್ ಸುಧೀರ್ ಕವಿ ಸಮ್ಮಿಲನ ಉದ್ಘಾಟಿಸಿದರು. ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ ಎಸ್ , ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಬಿ ಎಂ ಗುರುರಾಜ್ ರಾವ್ ಉಪಸ್ಥಿತರಿದ್ದರು.
Leave a Reply