
ಕೋಟ : ಬಾಂಧವ್ಯ ಫೌಂಡೇಶನ್ ನಿಂದ ನೆರವು ಯೋಜನೆಯಿಂದ ಪ್ರಧನ್ಯ ಎಂಬ ಬಾಲಕಿಗೆ ಕರುಳಿನ ಸಮಸ್ಯೆಯ ವೈದ್ಯಕೀಯ ನೆರವು 50,000 ಸಾಂಕೇತಿಕವಾಗಿ ಹಸ್ತಾಂತರ ಮಾಡಲಾಯಿತು.
ಮೊತ್ತವನ್ನು ಚಿಕಿತ್ಸೆ ಪಡೆಯುವ ಆಸ್ಪತ್ರೆಗೆ ಬಾಂಧವ್ಯ ಟ್ರಸ್ಟ್ ಮೂಲಕ ನೀಡಿತು. ಮತ್ತು ಬ್ರಹ್ಮಾವರ ಬೋರ್ಡ್ ಶಾಲಾ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಪ್ರತಿನಿದಿಸುವ 4 ತಂಡದ 45 ಮಕ್ಕಳಿಗೆ ಉತ್ತಮ ಗುಣಮಟ್ಟದ ಕ್ರೀಡಾ ಸಮವಸ್ತç , ಹಂಗಾರಕಟ್ಟೆ ದೂಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 57 ಮಕ್ಕಳಿಗೆ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿಜಿ ಬ್ಯಾಟನ್ ಪ್ರಶಸ್ತಿ ವಿಜೇತ ಸುನೀಲ್ ಪಾಂಡೇಶ್ವರ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಂಧವ್ಯ ಸಂಸ್ಥೆಯ ಮುಖ್ಯಸ್ಥ ದಿನೇಶ್ ಬಾಂಧವ್ಯ ಅತಿಥಿಗಳನ್ನು ಸ್ವಾಗತಿಸಿ ಯೋಜನೆ ನೆಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಜೋಸೆಫ್ ಎಲಿಯಾಸ್ ಮೆನೇಜಸ್, ಬ್ರಹ್ಮಾವರ ಠಾಣೆ ಎ.ಎಸ್ಐ ಜಯಕರ್ ಐರೋಡಿ, ಸಾಲೀಕೇರಿ ಶಾಖಾ ಅಂಚೆ ಪಾಲಕರಾದ ರೇಷ್ಮಾ ವಾಸುದೇವ ನಾಯಕ್, ಉಪಪ್ರಾಂಶುಪಾಲರಾದ ಉಮಾ.ಪಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ದೂಳಂಗಡಿ ಶಾಲೆ ಮುಖ್ಯೋಪಾಧ್ಯಯರಾದ ಪ್ರೆಸಿಲ್ಲಾ ಮತ್ತು ಮತ್ತಿತರು ಉಪಸ್ಥಿತರಿದ್ದರು ದೈಹಿಕ ಶಿಕ್ಷಕಿ ಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸುಧೀರ್ ಬಿ ಪೂಜಾರಿ ಧನ್ಯವಾದ ಸಮರ್ಪಿಸಿದರು.
ಬಾಂಧವ್ಯ ಫೌಂಡೇಶನ್ ನಿಂದ ನೆರವು ಯೋಜನೆಯ ಸಹಾಯಹಸ್ತ ಕಾರ್ಯಕ್ರಮದಲ್ಲಿ ಡಿಜಿ ಬ್ಯಾಟನ್ ಪ್ರಶಸ್ತಿ ವಿಜೇತ ಸುನೀಲ್ ಪಾಂಡೇಶ್ವರ ಇವರನ್ನು ಸನ್ಮಾನಿಸಲಾಯಿತು. ಉದ್ಯಮಿ ಜೋಸೆಫ್ ಎಲಿಯಾಸ್ ಮೆನೇಜಸ್, ಬ್ರಹ್ಮಾವರ ಠಾಣೆ ಎ.ಎಸ್ಐ ಜಯಕರ್ ಐರೋಡಿ, ಸಾಲೀಕೇರಿ ಶಾಖಾ ಅಂಚೆ ಪಾಲಕರಾದ ರೇಷ್ಮಾ ವಾಸುದೇವ ನಾಯಕ್ ಇದ್ದರು.
Leave a Reply