
ಕೋಟ: ಇತ್ತೀಚಿಗರ ಸಮಾಪನಗೊಂಡ ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮದ ಹಿನ್ನಲ್ಲೆಯಲ್ಲಿ ಲಕ್ಕಿಡಿಪ್ ವಿಜೇತರಿಗೆ ಶುಕ್ರವಾರ ಬಹುಮಾನವನ್ನು ಹಸ್ತಾಂತರಿಸಲಾಯಿತು.
ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಬಹುಮಾನ ವಿಜೇತರಾದ ಗಿರಿಜಾ ವಡ್ಡರ್ಸೆ ಹಾಗೂ ಚಿತ್ರಪಾಡಿಯ ಕೃಷ್ಣ ಬಾಯಿ ಇವರುಗಳಿಗೆ ಚಿನ್ನದ ಕಾಯಿನ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಚಂದ್ರಶೇಖರ ಆಚಾರ್, ಚಂದ್ರ ಪೂಜಾರಿ, ದೇವದಾಸ್ ಕಾಂಚನ್, ಸುರೇಶ್ ಪೂಜಾರಿ, ದಾಮೋದರ್ ಜೋಗಿ, ದೇವೇಂದ್ರ ಗಾಣಿಗ, ದೇಗುಲದ ಟ್ರಸ್ಟಿಗಳಾದ ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ ಗಿಳಿಯಾರು, ಸುಬ್ರಾಯ ಜೋಗಿ ಇದ್ದರು.
Leave a Reply