
ಕೋಟ: ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕೋಟ ಪಡುಕರೆ ಇವರ ಸಹಯೋಗದೊಂದಿಗೆ ಮಾದಕ ವ್ಯಸನ ಮುಕ್ತ ನಾಲ್ಕನೇ ಸರಣಿ ಕಾರ್ಯಾಗಾರ ಕಾರ್ಯಕ್ರಮ ಅ.18ರ ಪೂರ್ವಾಹ್ನ ಪದವಿ ಪೂರ್ವಕಾಲೇಜು ಕೋಟ ಪಡುಕರೆ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂತೋಷ್ ಕುಮಾರ್ ಕಾರ್ಕಳ, ಹೆಡ್ ಕಾನ್ಸ್ಟೇಬಲ್ ಹೆಚ್ಚುವರಿ ಪೊಲೀಸ್ ಅದಿಕ್ಷಕರ ಕಚೇರಿ ಉಡುಪಿ ಭಾಗಿಯಾಗಲಿದ್ದಾರೆ, ಕಾರ್ಯಕ್ರಮವನ್ನು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ ಕುಂದರ್, ಕೋಟ ಕರ್ಣಾಟಕ ಬ್ಯಾಂಕ್ ಪ್ರಭಂಧಕ ಗುರುರಾಜ್, ಪದವಿ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಿ ಸೇರಿದಂತೆ ಹಲವರುಭಾಗಿಯಾಗಲಿದ್ದಾರೆ ಎಂದು ಪಂಚವರ್ಣ ಸಂಘಟನೆ ತಿಳಿಸಿದೆ.
Leave a Reply