Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣಿಪಾಲ : ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಪೊಲೀಸರಿಂದ ದಾಳಿ…!!

ಮಣಿಪಾಲ: ವೈಶ್ಯಾವಾಟಿಕೆ ಅರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಅ.೨೧ ರಂದು ಮಹೇಶ್‌ ಪ್ರಸಾದ್‌ , ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರಿಗೆ ಮಣಿಪಾಲದಲ್ಲಿ ಬಾಡಿ ಮಸಾಜ್‌ ಹೆಸರಿನಲ್ಲಿ ಅಕ್ರಮ ಲಾಭಕ್ಕಾಗಿ ಮಹಿಳೆಯರನ್ನು ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ನೊಂದ ಮಹಿಳೆಯರನ್ನು ರಕ್ಷಿಸಿ, ಆರೋಪಿತರುಗಳಾದ ಇಮ್ರಾನ್ ಹಾಗೂ ಜೈಬಾಯ್‌ ಅಲಿಯಾಸ್‌ ಎಲಿಸಾ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಸ್ವತ್ತುಗಳನ್ನು ಸ್ವಾಧೀನ ಪಡಿಸಿ ಕೊಂಡಿದ್ದಾರೆ.

ಆರೋಪಿತರುಗಳಾದ ಮಹೇಶ್ ಹಾಗೂ ಅಶೋಕ್ ತಮ್ಮ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ ಸೆಲೂನ್‌ & ಸ್ಪಾ ಬಾಡಿ ಮಸಾಜ್‌ ಸೆಂಟರ್‌ ಇಟ್ಟುಕೊಂಡಿರುವುದು ಕಂಡು ಬಂದಿದ್ದು ಆರೋಪಿತರುಗಳಾದ ಇಮ್ರಾನ್ ಹಾಗೂ ಜೈಬಾಯ್‌ ಅಲಿಯಾಸ್‌ ಎಲಿಸಾ ಅವರೊಂದಿಗೆ ಸೇರಿಕೊಂಡು ಅವರ ವ್ಯವಹಾರಕ್ಕೆ ಸಹಕರಿಸುತ್ತಿರುವುದು ತಿಳಿದು ಬಂದಿರುವುದಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 190/2025 ಕಲಂ: 143 BNS & 3,4,5,6 ITP Act ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *