Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಘನತ್ಯಾಜ್ಯ ಘಟಕ ವಿರೋಧಿಸಿ ಶುಕ್ರವಾರ ಆಹೋರಾತ್ರಿ ಧರಣಿ, ಶನಿವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿಯ ಘನ ತ್ಯಾಜ್ಯ ಘಟಕದ ಉದ್ಘಾಟನೆ ವಿರೋಧಿಸಿ ಸ್ಥಳೀಯರು ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಕಪ್ಪು ಪಟ್ಟಿ ಧರಿಸಿ ಘಟಕದ ಸಮೀಪ ಪ್ರತಿಭಟನೆ ನಡೆಸಿದರು.

ಘಟಕದಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದ್ದು ಪರಿಸರಕ್ಕೆ ಹಾನಿಯಾಗಲಿದೆ ಹಾಗೂ ಸಿ.ಆರ್.ಝಡ್. ಅನುಮತಿ ಇದುವರೆಗೆ ಸಿಕ್ಕಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ. ಸ್ಥಳೀಯರು ಹೈಕೋರ್ಟ್ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಉದ್ಘಾಟನೆ ನಡೆಸಿರುವುದು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮುಂದೆ ಘಟಕದ ವಿರುದ್ಧವಾಗಿ ತೀರ್ಪು ಬಂದು ಕೋಟ್ಯಾಂತರ ರೂ ಹಾನಿಯಾದರೆ ಅದಕ್ಕೆ ಅಧಿಕಾರಿಗಳು, ಇಂದಿನ ಜನಪ್ರತಿನಿಧಿಗಳು ನೇರ ಹೊಣೆಯಾಗುತ್ತಾರೆ ಎಂದು  ಹೋರಾಟಗಾರರ ಪರವಾಗಿ ಕಾಂಗ್ರೆಸ್ ಜಿಲ್ಲಾ ಹಿಂದುಳಿದ ಘಟಕದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಎಚ್ಚರಿಕೆ ನೀಡಿದರು.

ಈ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು ಆಹೋರಾತ್ರಿ ನಡೆಸಿ ಪ್ರತಿಭಟನೆಯಲ್ಲಿ ಪ.ಪಂ.ಸದಸ್ಯ ಶ್ರೀನಿವಾಸ್ ಅಮೀನ್, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷ ತಿಮ್ಮ ಪೂಜಾರಿ, ದಿನೇಶ್ ಗಾಣಿಗ ಕೋಟ, ಸ್ಥಳೀಯ ಹೋರಾಟಗಾರರಾದ  ಮಹೇಶ್ ಪೂಜಾರಿ, ಸಂತೋಷ್ ಪೂಜಾರಿ, ಅಶೋಕ್ ಪೂಜಾರಿ, ನಾಗರಾಜ್, ಗಣೇಶ್ ಮೊದಲಾದವರು ಭಾಗಿಯಾದರು. ಸಾಲಿಗ್ರಾಮ ಘನತ್ಯಾಜ್ಯ ಘಟಕ ವಿರೋಧಿಸಿ ಶುಕ್ರವಾರ ಆಹೋರಾತ್ರಿ ಧರಣಿ,ಶನಿವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *