Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಂಗ ನಿರ್ದೇಶಕ ವೈಕುಂಠ ಹೆಬ್ಬಾರ ಸಂಸ್ಮರಣೆ ಮತ್ತು “ಶ್ರೀವೈಕುಂಠ ಪ್ರಶಸ್ತಿ”

ಕೋಟ: ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯ ನಿಕಟಪೂರ್ವ ಅಧ್ಯಕ್ಷರಾದ, ಶ್ರೇಷ್ಠ ರಂಗ ನಿರ್ದೇಶಕರು, ಸಂಘಟಕರಾಗಿರುವ ಐರೋಡಿ ವೈಕುಂಠ ಹೆಬ್ಬಾರರ ಸಂಸ್ಮರಣೆ ಮತ್ತು ಅವರ ನೆನಪಿನಲ್ಲಿ ಕೊಡಲ್ಪಡುವ ಶ್ರೀ ವೈಕುಂಠ ಪ್ರಶಸ್ತಿ” ಪ್ರದಾನ ಸಮಾರಂಭವು ಅ. 26 ರಂದು ಆದಿತ್ಯವಾರ ನಡೆಯಲಿದೆ.

ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗ ಮಂಟಪದಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಕ್ರಮವು ಅಪರಾಹ್ನ 2-30 ಕ್ಕೆ ಶಲ್ಯಭೇಧನ ಎಂಬ ಯಕ್ಷಗಾನ ತಾಳಮದ್ದಲೆಯಿಂದ ಪ್ರಾರಂಭವಾಗಿ ಸಂಜೆ ಗಂಟೆ 5-00 ರಿಂದ ಆನಂದ.ಸಿ. ಕುoದರ್ ರವರ ಅಧ್ಯಕ್ಷತೆಯಲ್ಲಿ ಕಲ್ಬಾಗ್ ಗೋಪಾಲಕೃಷ್ಣ ಹೆಗಡೆ ಯವರನ್ನು “ಶ್ರೀ ವೈಕುಂಠ ಪ್ರಶಸ್ತಿ” ಯೊಂದಿಗೆ ಪುರಸ್ಕರಿಸಲಾಗುವುದು.

ಆಕಾಶವಾಣಿಯ ಮಾಜಿ ಉದ್ಘೋಷಕಿ  ಶ್ರೀಮತಿ ನಾರಾಯಣೀ ದಾಮೋದರ್ ರವರು ಸಂಸ್ಮರಣಾ ಮಾತುಗಳನ್ನು, ಟಿ. ರಂಗ ಪೈ ಮಣಿಪಾಲ ಇವರು ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಭಾಷಣ ಮಾಡಲಿರುವರು. ಹಿರಿಯ ಯಕ್ಷಗಾನ ವಿದ್ವಾಂಸರಾದ  ಪ್ರಭಾಕರ ಜೋಷಿ ಮತ್ತು ಐರೋಡಿ ನರಸಿಂಹ ಹೆಬ್ಬಾರ್ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

6 ಗಂಟೆಯಿoದ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಲೆ ನಡೆಯಲಿದ್ದು ಉಮಾಕಾಂತ ಭಟ್ಟ, ರಾಧಾಕೃಷ್ಣ ಕಲ್ಚಾರ್, ಪ್ರಭಾಕರ ಜೋಷಿ, ಮಲ್ಪೆ ಲಕ್ಷ್ಮಿ  ನಾರಾಯಣ ಸಾಮಗ, ಜಬ್ಬಾರ್ ಸಮೊ, ಪವನ ಕಿರಣಕೆರೆ, ಬಿಲ್ಲಾಡಿ ಗಣೇಶ ಆಚಾರ್, ಶಂಕರ ಪೈ, ರಾಘವೇಂದ್ರ ಹೆಗಡೆ, ಕೃಷ್ಣ ಪ್ರಕಾಶ ಉಳಿತ್ತಾಯ, ವಾಗ್ವೀಲಾಸ ಭಟ್ಟ ಕಲಾವಿದರಾಗಿ ಭಾಗವಹಿಸಲಿದ್ದಾರೆಂದು ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *