
ಕೋಟ: ಶ್ರೀ ಅಘೋರೇಶ್ವರ ಮೆಲೋಡಿಸ್ ಗ್ರೂಪ್ ಕೋಟ ಸಾರಥ್ಯದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರ, ಶಾರದಾ ಸೌಂಡ್ & ಲೈಟ್ ಬೀಜಾಡಿ, ಶ್ರೀರಾಮನಾಮ ಸಂಕೀರ್ತನ ಮಹಿಳಾ ಕುಣಿತ ಭಜನಾ ಮಂಡಳಿ ಕುಂಭಾಶಿ, ಚoಡಿಕಾ ಶ್ರೀ ದುರ್ಗಾಪರಮೇಶ್ವರಿ ಶ್ರೀ ಶನೇಶ್ವರ ಮಹಿಳಾ ಕುಣಿತ ಭಜನಾ ತಂಡ ಕಾರ್ಕಡ, ಶ್ರೀ ರಾಮಮೃತ ಕುಣಿತ ಭಜನಾ ತಂಡ ಕಾರ್ಕಡ, ದಲಿತ ಸಂಘರ್ಷ ಸಮಿತಿ ಕೋಟ ಹೋಬಳಿ ಇವರ ಸಹಯೋಗದೊಂದಿಗೆ ಇತ್ತೀಚಿಗೆ ಅಗಲಿದ ಶಿಕ್ಷಕ ಸಾಹಿತಿ ಸಂತೋಷ್ ಕುಮಾರ್ ಕೋಟ ಇವರಿಗೆ ಗೀತ ನಮನದ ನುಡಿ ನಮನ ಕಾರ್ಯಕ್ರಮ ಶ್ರೀ ಅಮೃತೇಶ್ವರಿ ಸಭಾಭವನದಲ್ಲಿ ಭಾನುವಾರ ಜರಗಿತು.
ಸಂತೋಷ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಿಕ್ಷಕ ಸಿದ್ದಾಪುರ ಶ್ರೀಧರ್ ಶೆಟ್ಟಿ ಸಂತೋಷ್ ಕುಮಾರ್ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿಶ್ವಾರ್ಥ ಬದುಕಿನ ಕಾಯಕಯೋಗಿಯಾಗಿದ್ದರು, ತನ್ನ ವಯಕ್ತಿಕ ಜೀವನದ ಬಗ್ಗೆ ಚಿಂತಸದೆ ಸಮಾಜಕ್ಕೆ ಶೈಕ್ಷಣಿಕ ಕ್ಷೇತ್ರಕ್ಕೆ ಸಮರ್ಪಿಸಿಕೊಂಡಿದ್ದರು, ಅವರೊಬ್ಬ ಜನರಿಗೆ ಮಾದರಿ ಶಿಕ್ಷಕನಾಗಿ ಜನಜನಿತರಾಗಿದ್ದರು ಇಂತಹ ಮಹಾನ್ ಚೇತನ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಅನುಭವಿಸುವಂತ್ತಾಗಿದೆ ಎಂದರು.
ಕೋಟ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಕೋಟ ಮಾತನಾಡಿ ಒಬ್ಬ ಶಿಕ್ಷಕ ಹೇಗಿರಬೇಕು ಅಂದರೆ ಸಂತೋಷ್ ಮಾಸ್ಟರ್ ಅನ್ನ ವಿದ್ಯಾರ್ಥಿಗಳು ಹಾಗೂ ಇತರರು ನೋಡಿ ಕಲಿಬೇಕು. ಅವರು ವಿದ್ಯಾರ್ಜನೆ ಮಾಡುತ್ತಿರುವಂತಹ ಶಾಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಶೇಕಡ 100 ರಷ್ಟು ಫಲಿತಾಂಶವನ್ನು ತಂದುಕೊಡುವಲ್ಲಿ ಯಶಸ್ವಿ ಕಂಡ ಸಂತೋಷ್ ಮಾಸ್ಟುç ಎಂದು ಹೇಳಿದರು.
ವಕೀಲರಾದ ಟಿ.ಮಂಜುನಾಥ್ ಗಿಳಿಯಾರು ಮಾತನಾಡಿ ಸಂತೋಷ ಮಾಸ್ಟರ್ನ್ನು ಕಳೆದುಕೊಂಡಿದ್ದು ನಮಗೆಲ್ಲರಿಗೆ ತುಂಬಾ ನೋವು ತಂದಿದೆ,ಅವರು ಹಲವಾರು ಕನಸುಗಳನ್ನು ಕಟ್ಟಿಕೊಂಡಿರುವ ಒಬ್ಬ ಪ್ರಾಮಾಣಿಕ ಶಿಕ್ಷಕ,ಅಂತ ಪ್ರಾಮಾಣಿಕ ಶಿಕ್ಷಕನನ್ನು ನಾವೆಲ್ಲರೂ ಇಂದು ಕಳೆದುಕೊಂಡಿದ್ದೇವೆ ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ ಎಂದು ಭಾವುಕರಾಗಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ನರೇಂದ್ರ ಕುಮಾರ್ ಕೋಟ , ಜೈ ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರ ಅಧ್ಯಕ್ಷ ಪುಂಡಲೀಕ ಮೊಗವೀರ, ದಸಂಸ ಕೋಟ ಹೋಬಳಿಯ ಶಾಖೆಯ ಸಂಚಾಲಕ ನಾಗರಾಜ್ ಪಡುಕರೆ, ಕುಮಾರ ಕೋಟ, ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷೆ ವಸುಮತಿ ನಾಗೇಶ್, ಶ್ರೀ ರಾಮಮೃತ ಕುಣಿತ ಭಜನಾ ತಂಡ ಕಾರ್ಕಡ ಗಿರಿಜಾ ಸುವರ್ಣ, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು, ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಕೋಟ ತಂಡದವರಿoದ ಸಂತೋಷ್ ಮಾಸ್ಟರ್ಗೆ ಗಾಯನದ ಮೂಲಕ ಗೀತ ನಮನ ಸಲ್ಲಿಸಲಾಯಿತು. ನಾಗೇಂದ್ರ ಆಚಾರ್ಯ ಚಿತ್ರಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಸುಜಾತ ಕುಂಭಾಶಿ ಸ್ವಾಗತಿಸಿದರು. ಶ್ರೀ ಅಘೋರೇಶ್ವರ ಮೆಲೋಡಿಸ್ ಗ್ರೂಪ್ ಕೋಟ ಮುಖ್ಯಸ್ಥ ರವಿ ಬನ್ನಾಡಿ ಪ್ರಾಸ್ತವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಶ್ರೀ ಅಘೋರೇಶ್ವರ ಮೆಲೋಡಿಸ್ ಗ್ರೂಪ್ ಕೋಟ ಇವರ ಸಾರಥ್ಯದಲ್ಲಿ ಇತ್ತೀಚಿಗೆ ಅಗಲಿದ ಶಿಕ್ಷಕ ಸಾಹಿತಿ ಸಂತೋಷ್ ಕುಮಾರ್ ಕೋಟ ಇವರಿಗೆ ಗೀತ ನಮನದ ನುಡಿ ನಮನ ಕಾರ್ಯಕ್ರಮ ಶ್ರೀ ಅಮೃತೇಶ್ವರಿ ಸಭಾಭವನದಲ್ಲಿ ಭಾನುವಾರ ಜರಗಿತು. ಸಾಹಿತಿ ನರೇಂದ್ರ ಕುಮಾರ್ ಕೋಟ , ಜೈ ಕುಂದಾಪ್ರ ಸೇವಾ ಟ್ರಸ್ಟ್ ಕುಂದಾಪುರ ಅಧ್ಯಕ್ಷ ಪುಂಡಲೀಕ ಮೊಗವೀರ, ದಸಂಸ ಕೋಟ ಹೋಬಳಿಯ ಶಾಖೆಯ ಸಂಚಾಲಕ ನಾಗರಾಜ್ ಪಡುಕರೆ, ಕುಮಾರ ಕೋಟ, ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷೆ ವಸುಮತಿ ನಾಗೇಶ್ ಇದ್ದರು.














Leave a Reply