
ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಮಹಾವಿಷ್ಣು ಭಜನಾ ಸಂಘ ಪಾರಂಪಳ್ಳಿ ಇವರ ಸಹಭಾಗಿತ್ವದಲ್ಲಿ ಪಾರಂಪಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರುಗಿದ 23ನೇ ವರ್ಷದ ಕಾರ್ತಿಕ ಮಾಸದ ನಗರ ಭಜನೆಯನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ ಶಾರೀರ ಮತ್ತು ಶರೀರ ಇವು ಎರಡೂ ಸುಸ್ಥಿತಿಯಲ್ಲಿರಲು ಭಜನೆ ಮುಖ್ಯವಾದ ಮಾಧ್ಯಮ ನಮ್ಮ ಮನಸ್ಸಿನ ಆರೋಗ್ಯಕ್ಕೆ ಭಜನೆ ಸಹಕಾರಿ ಎಂದು ನುಡಿದರು.
ಶ್ರೀ ಮಹಾವಿಷ್ಣು ದೇವಸ್ಥಾನ ಪಾರಂಪಳ್ಳಿ ಇದರ ವ್ಯವಸ್ಥಾಪನಾ ಸಮಿತಿ ಹಾಗೂ ಶ್ರೀ ಮಹಾವಿಷ್ಣು ಭಜನಾ ಸಂಘ ಇದರ ಅಧ್ಯಕ್ಷ ಪಿ.ರಾಮಚಂದ್ರ ಉಪಾಧ್ಯ, ಅರ್ಚಕ ವೇ. ಮೂ. ಪಿ. ಜನಾರ್ದನ ಅಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಜಿ. ಪಟ್ಟಾಭಿರಾಮ ಸೋಮಯಾಜಿ ಕಾರ್ತಿಕ ಮಾಸದ 30 ದಿನಗಳಲ್ಲಿ ವಲಯದ 30 ದೇಗುಲಗಳಲ್ಲಿ ಸಭಾದ ವತಿಯಿಂದ ಪ್ರತಿದಿನ ಸಂಜೆ ಭಜನೆ ನಡೆಯಲಿರುವುದು ಎಂದು ತಿಳಿಸಿದರು.
ಸಭಾದ ಕಾರ್ಯದರ್ಶಿ ಕೆ ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು. ವಲಯದ ವ್ಯಾಪ್ತಿಯಲ್ಲಿರುವ 12 ಭಜನಾ ತಂಡಗಳು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐರೋಡಿ ಹಾಗೂ ಚಿತ್ರಪಾಡಿ ಗ್ರಾಮದ ತಲಾ ಒಬ್ಬರಿಗೆ ವೈದ್ಯಕೀಯ ನೆರವನ್ನು ಟ್ರಸ್ಟಿ ಪಾರಂಪಳ್ಳಿ ಸದಾಶಿವ ಮಧ್ಯಸ್ಥ ವಿತರಿಸಿದರು ಸಭಾದ ಜೊತೆ ಕಾರ್ಯದರ್ಶಿ ಪಿ ಕೃಷ್ಣ ಪ್ರಸಾದ ಹೇಳೆ9 ವಂದಿಸಿದರು. ಸಭಾದ ಗೌರವ ಸಲಹೆಗಾರ ಯಂ ಶಿವರಾಮ ಉಡುಪ, ಉಪಾಧ್ಯಕ್ಷ ಪಿ. ಸಿ. ಹೊಳ್ಳ, ಕೋಶಾಧಿಕಾರಿ ಕೆ.ನಾಗರಾಜ ಉಪಾಧ್ಯ, ಸೂರ್ಯನಾರಾಯಣ ಅಲ್ಸೆ, ಗ್ರಾಮ ಪ್ರತಿನಿಧಿಗಳು , ಪಿ. ಸದಾಶಿವ ಮಧ್ಯಸ್ಥ ಮುಂತಾದವರು ಉಪಸ್ಥಿತರಿದ್ದರು.
ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಮಹಾವಿಷ್ಣು ಭಜನಾ ಸಂಘ ಪಾರಂಪಳ್ಳಿ ಇವರ ಸಹಭಾಗಿತ್ವದಲ್ಲಿ ಪಾರಂಪಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರುಗಿದ 23ನೇ ವರ್ಷದ ಕಾರ್ತಿಕ ಮಾಸದ ನಗರ ಭಜನೆಯನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಮಹಾವಿಷ್ಣು ದೇವಸ್ಥಾನ ಪಾರಂಪಳ್ಳಿ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ರಾಮಚಂದ್ರ ಉಪಾಧ್ಯ, ಅರ್ಚಕ ವೇ. ಮೂ. ಪಿ. ಜನಾರ್ದನ ಅಡಿಗ ಇದ್ದರು.














Leave a Reply