
ಕೋಟ: ಸಮಾಜದ ಸೇವೆಗಾಗಿ ತನ್ನ ಜೀವಿತ ಅವಧಿಯನ್ನು ಸಮರ್ಪಿಸುವ ಸಾಮಾಜಿಕ ಕಾರ್ಯಕರ್ತರ ಸೇವೆ ಅನನ್ಯವಾಗಿದೆ ಅದೇ ರೀತಿ ತನ್ನ ಹುಟ್ಟುಹಬ್ಬವನ್ನು ಆಶ್ರಮದ ನಿವಾಸಿಗಳ ಜತೆ ಆಚರಿಸಿಕೊಳ್ಳುವ ಭರತ್ ಗಾಣಿಗ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಹೇಳಿದರು.
ಮಂಗಳವಾರ ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೋಟದ ಸಾಮಾಜಿಕ ಕಾರ್ಯಕರ್ತ ಭರತ್ ಗಾಣಿಗ ಇವರು ನೀಡಿದ ಬಟ್ಟೆ ಹಾಗೂ ಊಟೋಪಚಾರ ವಿತರಿಸಿ ಮಾತನಾಡಿ ಸಮಾಜಕ್ಕಾಗಿ ಸೇವೆ ಸಲ್ಲಿಸುವುದರ ಜತೆಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಇಂಥಹ ಕಾರ್ಯ ಸಮಾಜಕ್ಕೆ ಇನ್ನಷ್ಟು ಸೇವಾ ಕೈಂಕರ್ಯ ತುಂಬಲು ಪ್ರೇರಣೆಯಾಗಿದೆ.ಹಸಿದ ಜೀವಕ್ಕೆ ಚೈತನ್ಯ ತುಂಬುವ ಹೊಸಬದುಕು ಆಶ್ರಮದ ಮುಖ್ಯಸ್ಥರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಇದೇ ವೇಳೆ ಬಟ್ಟೆ ಪರಿಕರವನ್ನು ಗಣ್ಯರ ಮೂಲಕ ಹೊಸಬದುಕು ಆಶ್ರಮದ ಮುಖ್ಯಸ್ಥರಾದ ವಿನಯಚಂದ್ರ ಸಾಸ್ತಾನ,ಪತ್ನಿ ರಾಜಶ್ರೀ ಹಸ್ತಾಂತರಿಸಿಕೊoಡರು. ಈ ಸಂದರ್ಭದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸುವರ್ಣ, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ ಗಿಳಿಯಾರು,ಶಿವ ಪೂಜಾರಿ,ಕಾಂಗ್ರೆಸ್ ಮುಖಂಡರಾದ ದಿನೇಶ್ ಬಂಗೇರ, ಮಮತಾ,ಜೀವನ್ ಮಿತ್ರ ಬಳಗದ ಕಿಶೋರ್ ಶೆಟ್ಟಿ, ವಸಂತ ಸುವರ್ಣ, ಗೋಪಾಲಕೃಷ್ಣ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೋಟದ ಸಾಮಾಜಿಕ ಕಾರ್ಯಕರ್ತ ಭರತ್ ಗಾಣಿಗ ಇವರು ನೀಡಿದ ಬಟ್ಟೆ ಹಾಗೂ ಊಟೋಪಚಾರವನ್ನು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ವಿತರಿಸಿ ಮಾತನಾಡಿದರು. ಕೋಟ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸುವರ್ಣ, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ ಗಿಳಿಯಾರು, ಶಿವ ಪೂಜಾರಿ ಇದ್ದರು.














Leave a Reply