
ಕೋಟ: ವೈಕುಂಠ ಹೆಬ್ಬಾರ್ ಇವರು ಒಬ್ಬ ಸಮರ್ಥ ನಾಟಕ ನಿರ್ದೇಶಕರಾಗಿ, ಕಲಾವಿದರಾಗಿ ಮತ್ತು ಉದ್ಯಮಿಯಾಗಿ ಪ್ರಸಿದ್ದಿ ಪಡೆದವರು. ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂಧಿಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಹೆಬ್ಬಾರರು ಶ್ರಮದಿಂದ ಮೇಲ್ಬಂದವರು. ಔಷಧ ಅಂಗಡಿ, ಆಸ್ಪತ್ರೆ, ಮೂರು ಮಕ್ಕಳಿಗೆ ವೈದ್ಯಕೀಯ ವಿದ್ಯಾಭ್ಯಾಸ ನೀಡಿದ್ದಲ್ಲದೇ ಹಲವಾರು ಸಂಸ್ಥೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡವರು. ರೂಪರಂಗ, ಗೆಳೆಯರ ಬಳಗ ಹಂಗಳೂರು ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ನಾಟಕಗಳಿಗೆ ನಿರ್ದೇಶನ ನೀಡಿದವರು.
ಹಂಗಾರಕಟ್ಟೆ- ಯಕ್ಷಗಾನ ಕಲಾಕೇಂದ್ರದ ಸದಸ್ಯರಾಗಿದ್ದು, ಅಧ್ಯಕ್ಷರಾಗಿ ಅದರ ಸರ್ವಾಂಗೀಣ ಪ್ರಗತಿಗೆ ಕಾರಣ ಪುರುಷರು, ಸಾರ್ವಜನಿಕವಾಗಿ ಗುರುತಿಸಿಕೊಂಡವರು. ಹಲವರ ಆರೋಗ್ಯ, ವಿದ್ಯಾಭ್ಯಾಸಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಆಧಾರ ಸ್ತಂಭವಾಗಿ ನಿಂತವರು. ಬಡತನದಿಂದ ತನ್ನ ಬೌಧ್ಧಿಕ, ದೈಹಿಕ ಶ್ರಮದಿಂದ ಮೇಲೆಬಂದ ಹೆಬ್ಬಾರರನ್ನು ಕರ್ಮಯೋಗಿ ಎನ್ನಬಹುದು. ಅವರ ಹೆಸರಿನಲ್ಲಿ ಪ್ರತಿವರ್ಷ ಅವರ ಕುಟುಂಬದವರು ಕಲಾವಿದರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ ಅಭಿಪ್ರಾಯಪಟ್ಟರು.
ಕಲಾಕೇಂದ್ರದ ಅಧ್ಯಕ್ಷ ಆನಂದ್.ಸಿ.ಕುoದರ್ ಅಧ್ಯಕ್ಷತೆಯಲ್ಲಿ ನಡೆದ ವೈಕುಂಠ ಹೆಬ್ಬಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಮಾಜಿ ಉದ್ಘೋಷಕಿ ನಾರಾಯಣೀ ದಾಮೋದರ್‌ರರು ವೈಕುಂಠ ಹೆಬ್ಬಾರರ ಜೀವನ ವೃತ್ತಾಂತವನ್ನು ತಿಳಿಸುತ್ತಾ ಅವರ ಸಂಸ್ಮರಣಾ ಮಾತುಗಳನ್ನಾಡಿದರು.
ಅಂತರ್ರಾಷ್ಟ್ರೀಯ ತಬಲಾ ವಾದಕರಾದ ಕಲ್ಬಾಗ್ ಗೋಪಾಲಕೃಷ್ಣ ಹೆಗಡೆಯವರಿಗೆ 2025 ರ “ಶ್ರೀ ವೈಕುಂಠ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿ.ಕೆ.ಹೆಗಡೆ ಹರಿಕೇರಿ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಹೆಬ್ಬಾರ್ ಕುಟುಂಬದವರ ಪರವಾಗಿ ಐರೋಡಿ ನರಸಿಂಹ ಹೆಬ್ಬಾರ್ ಮತ್ತು ಡಾ|ಆದರ್ಶ ಹೆಬ್ಬಾರ್ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಗುಂಡ್ಮಿ ರಾಮಚಂದ್ರ ಐತಾಳರು ಕಾರ್ಯಕ್ರಮ ನಿರೂಪಿಸಿದರೆ, ಸೀತಾರಾಮ ಸೋಮಯಾಜಿ ಕೃತಜ್ಞತೆ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶಲ್ಯ ಭೇದನ ಮತ್ತು ಕಾರ್ಯಕ್ರಮದ ನಂತರ ಶಲ್ಯ ಪರ್ವ ಯಕ್ಷಗಾನ ತಾಳಮದ್ದಲೆಯನ್ನು ಏರ್ಪಡಿಸಲಾಗಿತ್ತು.
ಕಲಾಕೇಂದ್ರದ ಅಧ್ಯಕ್ಷರಾದ ಆನಂದ್.ಸಿ.ಕುoದರ್ ರವರ ಅಧ್ಯಕ್ಷತೆಯಲ್ಲಿ ನಡೆದ ವೈಕುಂಠ ಹೆಬ್ಬಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ತಬಲಾ ವಾದಕರಾದ ಕಲ್ಬಾಗ್ ಗೋಪಾಲಕೃಷ್ಣ ಹೆಗಡೆಯವರಿಗೆ 2025 ರ ಶ್ರೀ ವೈಕುಂಠ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ, ಕಲಾಕೇಂದ್ರದ ಅಧ್ಯಕ್ಷ ಆನಂದ್.ಸಿ.ಕುoದರ್ ಇದ್ದರು.














Leave a Reply