
ಕೋಟ: ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ, ಕೋಟ ಇವರ ಆಶ್ರಯದಲ್ಲಿ  ಕಾರ್ತಿಕ ಮಾಸದ ಪ್ರಯುಕ್ತ ಪ್ರತಿ ಸೋಮವಾರ ಸಂಜೆ 6:00 ರಿಂದ 8:00ರ ತನಕ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಸಂಕೀರ್ತನಾ ಕಾರ್ಯಕ್ರಮ ಏರ್ಪಡಿಸಿದೆ
ಸೋಮವಾರ ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಪ್ರದಾನ ಅರ್ಚಕರಾದ ರಾಜೇಂದ್ರ ಅಡಿಗ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಕೋಟ ಇದರ ಪ್ರಮುಖರಾದ ಪ್ರದೀಪ್ ಪೂಜಾರಿ, ಗೋಪಿನಾಥ್ ಕಿಣಿ, ಪ್ರದೀಪ್ ಶೆಟ್ಟಿ, ಶಶಿಧರ, ಅಶ್ವಥ್, ಅಭಿಜಿತ್ ಬಾರಿಕೆರೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕೋಟದ ಪಂಚವರ್ಣ ಮಹಿಳಾ ಭಜನಾ ತಂಡ ಹಾಗೂ ಗುರು ಮಾರುತಿ ಮಹಿಳಾ ಭಜನಾ ತಂಡ ಸಾಲಿಗ್ರಾಮ ತಂಡದಿoದ ಭಜನಾ ಕಾರ್ಯಕ್ರಮ ಜರಗಿತು.ಭಜನಾ ಕಾರ್ಯಕ್ರಮ ನೀಡಿದ ತಂಡಕ್ಕೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಪ್ರಸಾದ ವಿತರಿಸಿ ಗೌರವಿಸಿದರು.

ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಕಾರ್ತಿಕ ಮಾಸದ ಭಜನಾ ಸಂಕೀರ್ತನಾ ಕಾರ್ಯಕ್ರಮದಲ್ಲಿ ಕೋಟದ ಪಂಚವರ್ಣ ಮಹಿಳಾ ಭಜನಾ ತಂಡ ಭಜನಾ ಕಾರ್ಯಕ್ರಮ ನೀಡಿತು.ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಕೋಟ ಇದರ ಪ್ರಮುಖರಾದ ಪ್ರದೀಪ್ ಪೂಜಾರಿ, ಗೋಪಿನಾಥ್ ಕಿಣಿ, ಪ್ರದೀಪ್ ಶೆಟ್ಟಿ, ಶಶಿಧರ, ಅಶ್ವಥ್, ಅಭಿಜಿತ್ ಬಾರಿಕೆರೆ ಉಪಸ್ಥಿತರಿದ್ದರು.














Leave a Reply