
ಕೋಟ: ದಿ.ಡಾ.ಸತೀಶ್ ಪೂಜಾರಿ ಅವರ ಸ್ಮರಣಾರ್ಥ ಮನಸ್ಮಿತ ಫೌಂಡೇಶನ್, ಕೋಟ, ಗೀತಾನoದ ಫೌಂಡೇಶನ್ ಮಣೂರು ಪಡುಕರೆ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ, ಕರೋಕೆ ಗಾಯನ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನ.2ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಪಡುಕರೆ ಇಲ್ಲಿ ಆಯೋಜಿಸಿದೆ.
ಕಾರ್ಯಕ್ರಮವನ್ನು ನಾಡೋಜ ಡಾ | ಜಿ ಶಂಕರ್ ಉದ್ಘಟಿಸಲಿದ್ದು , ಗೀತಾನಂದ ಟ್ರಸ್ಟ್ ನ. ಪ್ರವರ್ತಕ ಆನಂದ ಸಿ ಕುಂದರ್, ಚಿನ್ಮಯ್ ಹಾಸ್ಪಿಟಲ್ ಕುಂದಾಪುರ ಮುಖ್ಯಸ್ಥ ಡಾ|ಉಮೇಶ್ ಪುತ್ರನ್ ದಿ|ಡ|ಸತೀಶ್ ಪೂಜಾರಿ ಅವರ ಸಂಸ್ಮರಣೆಗೈಯಲಿದ್ದಾರೆ..
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ಲೆಕ್ಕ ಪರಿಶೋಧಕ ಪದ್ಮನಾಭ ಕಾಂಚನ್, ಇoಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಸೆಂಟರ್ ಕುಂದಾಪುರ ಅಧ್ಯಕ್ಷ ಎಸ್ ಜಯಕರ್ ಶೆಟ್ಟಿ, ಯುವ ಮೆರಿಡಿಯನ್ ಇದರ ಪಾಲುದಾರ ಉದಯ್ ಕುಮಾರ್ ಶೆಟ್ಟಿ , ವಿನಯ್ ಕುಮಾರ್ ಶೆಟ್ಟಿ ಉಪಸ್ಥಿತಿರಿರಲಿದ್ದಾರೆ ಎಂದು ಸಂಘಟಕರಾದ ಶ್ರೀಮಾತಾ ಆಸ್ಪತ್ರೆಯ ನಿರ್ದೇಶಕ ಡಾ|ಪ್ರಕಾಶ್ ತೋಳಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Leave a Reply