Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಭಾವಿಗಳಿಗೆ ಮಾತ್ರ ಸೀಮಿತವೇ?

ಇಂದು ಕನ್ನಡ ರಾಜ್ಯೋತ್ಸವದ ಸುದಿನ.
ರಾಜ್ಯ ಮತ್ತು ಜನತೆ ಸಡಗರದಲ್ಲಿ ಮುಳುಗಿರುವಾಗ,
ಹೆಚ್ಚು ಚರ್ಚೆಯಾಗುತ್ತಿರುವ ವಿಷಯ — ಪ್ರಶಸ್ತಿ ಯಾರಿಗೆ ಸಿಕ್ಕಿತು, ಹೇಗೆ ಸಿಕ್ಕಿತು? ಇದು ಆ ಪ್ರಶಸ್ತಿಯ ವಿಶ್ವಾಸವನ್ನೇ ಸಂಶಯದ ಮೊನೆಯಲ್ಲಿ ನಿಲ್ಲಿಸಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಬಹುತೇಕ ಪ್ರಶಸ್ತಿಗಳು
ರಾಜಕೀಯ ಕೃಪಾಕಟಾಕ್ಷದಿಂದ ಹಂಚಲ್ಪಟ್ಟಿದೆ.
ಈ ಬಾರಿ ಪ್ರಶಸ್ತಿಗಿಂತ, ರಾಜಕೀಯ ಪ್ರಭಾವವೇ ಹೆಚ್ಚಾಗಿ ಕಂಗೊಳಿಸಿದೆ. ಜನಸೇವಕರು ರಾಜಕೀಯ ಬಲಸುವಷ್ಟು ಶಕ್ತರಲ್ಲದೇ ಇದ್ದರೆ ಪ್ರಶಸ್ತಿ ಮರಿಚಿಕೆಯೇ ಆಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ದುಡಿಯುವ ಒಬ್ಬ ನಿಸ್ವಾರ್ಥ ಸೇವಕನಿಗಿಂತ, ವಾಟ್ಸಪ್‌ ಶೀರ್ಷಿಕೆ ಬದಲಾಯಿಸುವವರಿಗೆ ಮೆಚ್ಚುಗೆ ದೊರೆಯುತ್ತಿವೆ.
ಪದವಿಗಿಂತ ಪ್ರಭಾವ ಮುಖ್ಯವಾಗಿದೆಯೆನ್ನಿಸುವ ಚಿತ್ರ! ನಮ್ಮ ಕಣ್ಣ ಮುಂದೆಯೇ ಕಾಣುತ್ತಿದೆ

ಜನತೆಯ ಪ್ರಶ್ನೆ ಗೆ ಉತ್ತರಿಸಿ
  ಪ್ರಶಸ್ತಿಗಳು ಕಲೆಯ ಗುರುತಿಗೋ ?  ಸಾಮಾಜಿಕ ಕೆಲಸಕ್ಕೋ? ಜನರ ಕಷ್ಟ ಕಾರ್ಪಣ್ಯಗಳಲ್ಲಿ ಸಹಕಾರವನ್ನು ನೀಡಿದವರಿಗೋ ಅಥವಾ ಬೆನ್ನ ಹಿಂದಿನ ರಾಜಕೀಯ ಶಕ್ತಿಗೋ?

ಉತ್ತರವನ್ನು ಮುಂದಿನ ದಿನಗಳಲ್ಲಿ ಜಿಲ್ಲಾಡಳಿತವು ನೀಡಲೇ ಬೇಕಿದೆ. ಪ್ರಶಸ್ತಿಗಳ ಮಾನದಂಡಗಳು ಸಾರ್ವಜನಿಕರಿಗೆ ಅರ್ಥೈಸುವ ಜವಾಬ್ದಾರಿ ಕೂಡ ಜಿಲ್ಲಾಡಳಿತಕ್ಕಿದೆ.

ಕನ್ನಡ ರಾಜ್ಯೋತ್ಸವವು ಎಲ್ಲರ ಹಬ್ಬವಾಗಬೇಕು, ಆದರೆ ಇಂದು ಅದು ರಾಜಕೀಯ ಮೇಲಾಟ ಹಾಗೂ ಅದರ ಹಿನ್ನೆಲೆಯಲ್ಲಿ ಕೆಲವರ ಪ್ರದರ್ಶನವಾಗಿಬಿಟ್ಟಿದೆ*.

ನ್ಯಾಯದ ದೀಪ ನಂದದಿರಲಿ —ಒಂದು ದಿನ ನಿಸ್ವಾರ್ಥ ಸೇವೆಯೇ ನಿಜವಾದ ರಾಜ್ಯೋತ್ಸವ ಪ್ರಶಸ್ತಿಯಾಗಲಿ.

ಪ್ರಶಸ್ತಿ ಪಡೆಯುವವರು ಹಾಗೂ ಅವರಿಗೆ ಸಂಬಂಧಪಟ್ಟವರು ಬಿಟ್ಟರೆ, ಈ ಒಳ್ಳೆಯ ಸುದಿನದಲ್ಲಿ ಸ್ವಾಭಿಮಾನಿ ಕನ್ನಡಿಗರನ್ನು  ಕಾಣಲು ಸಾಧ್ಯವಾಗುತ್ತಿಲ್ಲ.
ಇದು ಈ ಪ್ರಶಸ್ತಿಯ ವರ್ಚಸ್ಸನ್ನು ಹಣಕ್ಕೆ ಖರೀದಿ ಮಾಡುವ ಗೌರವ ಡಾಕ್ಟರೇಟ್ ನ ಮಟ್ಟಕ್ಕೆ ತಂದು ಬಿಟ್ಟಿರುವುದು ದುರಂತವೇ ಸರಿ!!

ನ್ಯಾಯದ ನಿರೀಕ್ಷೆಯಲ್ಲಿ ಕನ್ನಡ ತಾಯಿಯ ಕಣ್ಣು ನೀರು ಈ ನೆಲಕ್ಕೆ ತಾಗದಿರಲಿ ಎನ್ನುವ ಆಶಯದೊಂದಿಗೆ…..      

✍️ ಕೆಬಿಯಸ್.

Leave a Reply

Your email address will not be published. Required fields are marked *