ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘದಿoದ ಆರಂಭಗೊoಡ ಕ್ಷೀರ ಸಂಜೀವಿನಿಯಿoದ ಹೈನುಗಾರಿಕೆ ಹೆಚ್ಚಿನ ಬಲ ಸಿಗಲಿದೆ ಎಂದು ಕೆ.ಎಂ.ಎಫ್ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಹೇಳಿದರು. ಶುಕ್ರವಾರ ಕೋಟ ಸಹಕಾರಿ ವ್ಯವಸಾಯಕ ಸಂಘದ ಪ್ರಾಂಗಣದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ವಿನೂತನ ಕ್ಷೀರ ಸಂಜೀವಿನಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಹೈನುಗಾರಿಕೆ ಕರಾವಳಿ ಭಾಗದಲ್ಲಿ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಈ ಯೋಜನೆ ತುಂಬಾ ಸಹಕಾರಿಯಾಗಲಿದೆ. ಇದೊಂದು ಸಹಕಾರಿ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದರು.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಐಕಳದ ಬಾವ ದೇವಿ ಪ್ರಸಾದ ಶೆಟ್ಟಿ ಮಾತನಾಡಿ ಸಹಕಾರಿ ಚರಿತ್ರೆಯಲ್ಲಿ ಕೋಟ ಸಹಕಾರಿ ಸಂಘ ಹೊಸ ಹೊಸ ಯೋಜನೆಗಳ ಮೂಲಕ ಮನೆ ಮಾತಾಗಿ ಬೆಳೆದು ನಿಂತಿದೆ, ಹೈನುಗಾರಿಕೆ ಇಂದು ಉದ್ಯಮ ರೀತಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ, ಹಾಲಿಗೆ ಕನಿಷ್ಟಪಕ್ಷ ಲೀ.50ರೂ ಸಿಕ್ಕರೆ ಹೈನುಗಾರಿಕೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಕೋಟ ಸಂಘದ ಈ ಯೋಜನೆಯನ್ನು ಕೊಂಡಾಡಿದರು.
ಪ್ರಾರಾಂಭದಲ್ಲಿ ತಮಿಳುನಾಡಿನ ಈರೋಡ್ ನಿಂದ ಆಗಮಿಸಿದ ಒಟ್ಟು 12 ರಾಸುಗಳಿಗೆ ವಿಶೇಷ ರೀತಿಯಲ್ಲಿ ಗೋ ಪೂಜೆ ನೆರವೆರಿಸಲಾಯಿತು.ಅಲ್ಲದೆ ಆಯ್ದ ಫಲಾನುಭವಿಗಳಿಗೆ ರಾಸುಗಳ ಹಸ್ತಾಂತರ ಪ್ರಕ್ರೀಯೆ ನಡೆಯಿತು. ಕಾರ್ಯಕ್ರಮವನ್ನು ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ, ಕೆ.ಎಂಎಫ್ ನಿರ್ದೇಶಕರಾದ ಕೆ.ಶಿವಮೂರ್ತಿ ಉಪಾಧ್ಯಾ,ಮಮತಾ ಶೆಟ್ಟಿ,ಉಪ ವ್ಯವಸ್ಥಾಪಕ ಡಾ.ಮಾಧವ ಐತಾಳ್, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ.ಸುಧೀರ್ ಕುಮಾರ್, ಬ್ರಹ್ಮಾವರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ, ಕೋಟ ಸಹಕಾರ ವ್ಯವಸಾಯಕ ಸಂಘದ ಉಪಾಧ್ಯಕ್ಷ ಎಚ್ ನಾಗರಾಜ್ ಹಂದೆ, ನಿರ್ದೇಶಕರಾದ ತಿಮ್ಮ ಪೂಜಾರಿ, ಮಹೇಶ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ರವೀಂದ್ರ ಕಾಮತ್, ಅಜಿತ್ ದೇವಾಡಿಗ, ರಶ್ಮಿ, ವಸಂತಿ ಪೂಜಾರಿ, ರಂಜೀತ್ ಕುಮಾರ್, ಪ್ರೇಮಾ, ದಿನಕರ ಶೆಟ್ಟಿ, ಶೇಖರ್ ಮರಕಾಲ, ರಾಜಾರಾಂ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕರಾದ ಟಿ.ಮಂಜುನಾಥ್ ಗಿಳಿಯಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಸಿಬ್ಬಂದಿ ಮಂಜುನಾಥ್ ನಿರೂಪಿಸಿದರೆ, ಸಂಘದ ಸಿಇಓ ಶರತ್ ಕುಮಾರ್ ಶೆಟ್ಟಿ ವಂದಿಸಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಪ್ರಾಂಗಣದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ವಿನೂತನ ಕ್ಷೀರ ಸಂಜೀವಿನಿ ಯೋಜನೆಗೆ ಕೆ.ಎಂ.ಎಫ್ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಚಾಲನೆ ನೀಡಿದರು. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಐಕಳದ ಬಾವ ದೇವಿ ಪ್ರಸಾದ ಶೆಟ್ಟಿ, ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ, ಕೆ.ಎಂಎಫ್ ನಿರ್ದೇಶಕರಾದ ಕೆ. ಶಿವಮೂರ್ತಿ ಉಪಾಧ್ಯಾ, ಮಮತಾ ಶೆಟ್ಟಿ ಇದ್ದರು.















Leave a Reply