ಕೋಟ: ಛಾಯಾ ತರಂಗಿಣಿ ಸಂಗೀತ ಶಾಲೆ ಹರ್ತ್ತಟ್ಟು ಗಿಳಿಯಾರು ಇವರ ಪ್ರಾಯೋಜಕತ್ವದಲ್ಲಿ ಸ್ನೇಹಕೂಟ ಮಣೂರು ಮತ್ತು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸಹಯೋಗದೊಂದಿಗೆ ಇದೇ ಬರುವ ನ. 17ರಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಶತಕಂಠ ಗಾಯನ (ಭಕ್ತಿ ಸಂಗೀತ) ಇದರ ಪೂರ್ವಭಾವಿ ತಯಾರಿ ಕಾರ್ಯಕ್ರಮ ಸೋಮವಾರ ಮಣೂರು ದೇವಸ್ಥಾನದ ಆವರಣದಲ್ಲಿ ಜರಗಿತು.
ಗುರುಗಳಾದ ವಿದ್ವಾನ್ ಮಧೂರು ಪಿಬಾಲಸುಬ್ರಹ್ಮಣ್ಯಂ ಹಾಗೂ ವಿದುಷಿ ಉಷಾ ಹೆಬ್ಬಾರ್ ಅವರು ಪರಿಸರದ ಹಲವು ಭಜನಾ ಮಂಡಳಿಗಳ ಸದಸ್ಯರಿಗೆ ಶತಕಂಠ ಗಾಯನದಂದು ಹಾಡಲಿರುವ ಹಾಡುಗಳನ್ನು ಹಾಡುವ ಬಗ್ಗೆ ತರಬೇತಿಯನ್ನು ನೀಡಿದರು.
ಗೀತಾ ತುಂಗ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಭಾಗ್ಯೇಶ್ವರಿ ಮಯ್ಯ ಅವರು ಹಾಡಿನಲ್ಲಿ ಗುರುಗಳ ಜೊತೆ ಸಹಕರಿಸಿದರು. ಮಣೂರು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಂದರ್, ಸ್ನೇಹಕೂಟ ಮಣೂರು ಇದರ ಸಂಚಾಲಕಿ ಭಾರತಿ ವಿ ಮಯ್ಯ ಉಪಸ್ಥಿತರಿದ್ದರು. ಛಾಯಾ ತರಂಗಿಣಿ ಸಂಗೀತ ಶಾಲೆ ಗೋಪಾಲಕೃಷ್ಣ ಮಯ್ಯ ಸ್ವಾಗತಿಸಿದರು. ಛಾಯಾ ತರಂಗಿಣಿ ಸಂಗೀತ ಶಾಲೆ, ಹರ್ತಟ್ಟು ಇದರ ಸಂಗೀತ ಶಿಕ್ಷಕಿ ಭಾಗ್ಯೇಶ್ವರಿ ಮೈಯ್ಯ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಛಾಯಾ ತರಂಗಿಣಿ ಸಂಗೀತ ಶಾಲೆ ಹರ್ತ್ತಟ್ಟು ಗಿಳಿಯಾರು ಇವರ ಪ್ರಾಯೋಜಕತ್ವದಲ್ಲಿ ನ.17ರoದು ನಡೆಯಲಿರುವ ಶತಕಂಠ ಗಾಯನ (ಭಕ್ತಿ ಸಂಗೀತ) ಇದರ ಪೂರ್ವಭಾವಿ ತಯಾರಿ ಕಾರ್ಯಕ್ರಮ ಸೋಮವಾರ ಮಣೂರು ದೇವಸ್ಥಾನದ ಆವರಣದಲ್ಲಿ ಜರಗಿತು. ಮಣೂರು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಕುಂದರ್ , ಸ್ನೇಹಕೂಟ ಮಣೂರು ಇದರ ಸಂಚಾಲಕಿ ಭಾರತಿ ವಿ ಮಯ್ಯ ಉಪಸ್ಥಿತರಿದ್ದರು.















Leave a Reply