Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೆಂಬಲ ಬೆಲೆ ಕೇಂದ್ರದಲ್ಲಿ ಕೆಂಪು ಭತ್ತ ಖರೀದಿಗೆ ಕ್ರಮ ಕೈಗೊಳ್ಳುವಂತೆ ಕೋಟದ ರೈತಧ್ವನಿ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕೋಟ: ಉಡುಪಿ ಜಿಲ್ಲೆಯ ಎಲ್ಲಾ ಎ.ಪಿ.ಎಂ.ಸಿ.ಗಳಲ್ಲಿ ಬಿಳಿ ಭತ್ತವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದು ಕೆಂಪು ಭತ್ತ ಖರೀದಿಗೆ ಅವಕಾಶವಿರುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ಶೀಘ್ರವಾಗಿ ಕೆಂಪು ಭತ್ತ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋಟ ರೈತಧ್ವನಿ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.

ಜಿಲ್ಲೆಯ ರೈತರು ತಮ್ಮ 5,350 ಹೆಕ್ಟೇರ್‌ಗಳಲ್ಲಿ ಕೆಂಪು ಅಕ್ಕಿ ಎಂ.ಒ. 4 ಮತ್ತು ಜಯ ಇತ್ಯಾದಿ ತಳಿಗಳನ್ನು ಬೆಳೆಯುತ್ತಿದ್ದು ಸರಕಾರ ಹಾಗೂ ಇಲಾಖೆಯ ನಿರ್ಲಕ್ಷ್ಯದಿಂದ ರೈತರಿಗೆ ಸಮಸ್ಯೆಯಾಗಿದೆ. ಹೀಗಾಗಿ ಕೆಂಪು ಭತ್ತ ಖರೀದಿ ಮಾಡಲು ಅನುಮತಿ ನೀಡಬೇಕು ಅಲ್ಲದೇ ಈಗಲೇ ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಯಾವುದೇ ಮಿಲ್ಗಳಲ್ಲಿ ಖರೀದಿ ಮಾಡದಂತೆ ಕ್ರಮವಹಿಸಬೇಕು ಎಂದು ಮನವಿ ನೀಡಿದರು.

ಜಿಲ್ಲಾಧಿಕಾರಿ ಪರವಾಗಿ ಮನವಿ ಸ್ವೀಕರಿಸಿದ ಕಿರಿಯ ಅಧಿಕಾರಿಗಳು ಪೂರಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರೈತರ ನಿಯೋಗದಲ್ಲಿ ಜಯರಾಮ ಶೆಟ್ಟಿ ,ಟಿ. ಮಂಜುನಾಥ್ ಗಿಳಿಯಾರು, ಬಾಬು ಶೆಟ್ಟಿ, ಶಿವಮೂರ್ತಿ ಉಪಾಧ್ಯಾಯ, ಕೀರ್ತಿಶ್ ಪೂಜಾರಿ, ರಾಘವೇಂದ್ರ ಶೆಟ್ಟಿ, ಮಂಜುನಾಥ ಭಂಡಾರಿ, ತಿಮ್ಮ ಕಾಂಚನ್, ಮಹಾಬಲ ಪೂಜಾರಿ ಇದ್ದರು.

ಬೆಂಬಲ ಬೆಲೆ ಕೇಂದ್ರದಲ್ಲಿ ಕೆoಪು ಭತ್ತ ಖರೀದಿಗೆ ಕ್ರಮ ಕೈಗೊಳ್ಳುವಂತೆ ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿತು. ರೈತರ ನಿಯೋಗದಲ್ಲಿ ಟಿ. ಮಂಜುನಾಥ್ ಗಿಳಿಯಾರು, ಬಾಬು ಶೆಟ್ಟಿ, ಶಿವಮೂರ್ತಿ ಉಪಾಧ್ಯಾಯ, ಕೀರ್ತಿಶ್ ಪೂಜಾರಿ ಇದ್ದರು.

Leave a Reply

Your email address will not be published. Required fields are marked *