ಕೋಟ : ಕಲಾವಿದರು ತಮಗೆ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಪ್ರತಿ ಸಂದರ್ಭದಲ್ಲೂ ಕೂಡ ಪ್ರಸಂಗದ ಮೂಲ ಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರದರ್ಶನ ನೀಡಿದಲ್ಲಿ ಅಂತಹ ಕಥೆ ಖಂಡಿತವಾಗಿಯೂ ಯಶಸ್ವಿ ಆಗುತ್ತದೆ ಎಂಬುದಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರತ ಯಕ್ಷಗಾನ ಪ್ರಸಂಗಕರ್ತ ಮತ್ತು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಪಿ.ವಿ ಆನಂದ ಸಾಲಿಗ್ರಾಮ ಹೇಳಿದರು. ಅವರು ನವೆಂಬರ್ 8 ರಂದು ಸಾಸ್ತಾನದ ಬ್ರಹ್ಮ ಬೈದರ್ಕಳ ಪಂಜುರ್ಲಿ ಗರಡಿಯಲ್ಲಿ ಗೋಳಿಗರಡಿ ಮೇಳದ ಕಲಾವಿದರಿಗೆ ಈ ವರುಷದ ಬಹು ನಿರೀಕ್ಷಿತ ಯಕ್ಷಗಾನ ಪ್ರಸಂಗ ಹಂದಿಗದ್ದೆ ಸುರೇಶ್ ಕುಲಾಲ್ ವಿರಚಿತ ಮಹಾಶಕ್ತಿ ಚೌಡೇಶ್ವರಿ ಕಥೆಯ ತರಬೇತಿಯನ್ನು ಕಲಾವಿದರಿಗೆ ನೀಡಿ ಮಾತುಗಳನ್ನಾಡಿದರು.
ಮೇಳದ ಯಜಮಾನರಾದ ಜಿ ವಿಠಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಈ ಪ್ರಸಂಗದಲ್ಲಿ ಸಾಂಪ್ರದಾಯಿಕ ಬಣ್ಣದ ವೇಷ, ದೈವಗಳ ಅಬ್ಬರ, ನಿರಂತರ ಹಾಸ್ಯ, ದೈವ ನಂಬಿಕೆಯ ಮಹತ್ವ ಸೇರಿದಂತೆ ಉತ್ತಮ ಸಂದೇಶವಿದ್ದು, ಬೆಳಕು ಮತ್ತು ವಿಶಿಷ್ಟ ಸಂಯೋಜನೆಯನ್ನು ಅಳವಡಿಸಲಾಗಿದೆ ಎಂಬುದಾಗಿ ಹೇಳಿದರು. ವೇದಿಕೆಯಲ್ಲಿ ಕ್ಷೇತ್ರದ ಪಾತ್ರಿಗಳಾದ ಶಂಕರ ಪೂಜಾರಿ, ಮೇಳದ ಪ್ರೋತ್ಸಾಹಕರಾದ ಶಂಕರ ಕುಲಾಲ್, ಸಾಮಾಜಿಕ ಮುಂದಾಳು ಗಣಪಯ್ಯ ಆಚಾರ್ ಸೇರಿದಂತೆ ಭಾಗವತರಾದ ಸುರೇಶ್ ರಾವ್ ಬಾರ್ಕೂರು, ಆರ್ಡಿ ಸಂತೋಷ, ಹಿರಿಯ ಕಲಾವಿದರಾದ ಶ್ರೀಕಂಠ ಭಟ್, ಮಾಗೋಡು ರಾಘವೇಂದ್ರ ಸೇರಿದಂತೆ ಹಿಮ್ಮೇಳ ಮುಮ್ಮೇಳ ಕಲಾವಿದರೆಲ್ಲರೂ ಪಾಲ್ಗೊಂಡಿದ್ದರು.
ಸಾಸ್ತಾನದ ಬ್ರಹ್ಮ ಬೈದರ್ಕಳ ಪಂಜುರ್ಲಿ ಗರಡಿಯಲ್ಲಿ ಗೋಳಿಗರಡಿ ಮೇಳದ ಕಲಾವಿದರಿಗೆ ಈ ವರುಷದ ಬಹು ನಿರೀಕ್ಷಿತ ಯಕ್ಷಗಾನ ಪ್ರಸಂಗ ಹಂದಿಗದ್ದೆ ಸುರೇಶ್ ಕುಲಾಲ್ ವಿರಚಿತ ಮಹಾಶಕ್ತಿ ಚೌಡೇಶ್ವರಿ ಕಥೆಯ ತರಬೇತಿಯನ್ನು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಪಿ.ವಿ ಆನಂದ ಸಾಲಿಗ್ರಾಮ ಕಲಾವಿದರಿಗೆ ನೀಡಿ ಮಾತುಗಳನ್ನಾಡಿದರು. ಮೇಳದ ಯಜಮಾನರಾದ ಜಿ ವಿಠಲ ಪೂಜಾರಿ, ಕ್ಷೇತ್ರದ ಪಾತ್ರಿಗಳಾದ ಶಂಕರ ಪೂಜಾರಿ, ಮೇಳದ ಪ್ರೋತ್ಸಾಹಕರಾದ ಶಂಕರ ಕುಲಾಲ್, ಸಾಮಾಜಿಕ ಮುಂದಾಳು ಗಣಪಯ್ಯ ಆಚಾರ್ ಇದ್ದರು.















Leave a Reply