ಕೋಟ: ಸವಿತಾ ಸಮಾಜದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ.ರವಿ ಅಕ್ಷೇಪಕಾರಿ ಪದಬಳಕೆ ಮಾಡಿ ಅವಮಾನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿoದುಳಿದ ವರ್ಗಗಳ ವಿಭಾಗ ನ.8ರಂದು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಯಲ್ಲಿ
ಖಂಡನೆ ವ್ಯಕ್ತಪಡಿಸಿತು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೋಟ ತಿಮ್ಮ ಪೂಜಾರಿ ಮಾತನಾಡಿ, ಸವಿತಾ ಸಮಾಜ ಅತ್ಯಂತ ಶ್ರಮಿಕ ವರ್ಗವಾಗಿದ್ದು ಇವರ ವೃತ್ತಿಗೆ ಪಾರಂಪರಿಕ
ಮನ್ನಣೆ ಇದೆ. ಆದರೆ ಈ ಸಮಾಜವನ್ನು ಅವಮಾನಿಸಿ ಮಾತನಾಡುವುದು ರವಿಯವರಿಗೆ ಶೋಭೆ ತರುವುದಿಲ್ಲ. ಹೀಗಾಗಿ ಆದಷ್ಟು ಶೀಘ್ರವಾಗಿ ಅವರು ತಮ್ಮ ಹೇಳಿಕೆ ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಮತ್ತು ಸರಕಾರ ಇವರ ಹೇಳಿಕೆ ಪರಶೀಲಿಸಿ ಸೂಕ್ತ ಕಾನೂನು
ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹಾಗೂ ಪಕ್ಷದ ಪ್ರಮುಖರಾದ ಗೋಪಾಲ ಬಂಗೇರ, ಅಚ್ಚುತ ಪೂಜಾರಿ, ಚಂದ್ರ ಪೂಜಾರಿ, ಮಹಾಬಲ ಮಡಿವಾಳ, ಬಿ.ಶೇಖರ ಮರಕಾಲ, ದಿನೇಶ್ ಬಂಗೇರ, ವಿಜಯ ಪೂಜಾರಿ ಐರೋಡಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಹಿoದುಳಿದ ವರ್ಗಗಳ ವಿಭಾಗ ನ.8ರಂದು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಟೀ ಯಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಅಕ್ಷೇಪಕಾರಿ ಪದಬಳಕೆಯ ವಿರುದ್ಧ ಖಂಡನೆ ವ್ಯಕ್ತಪಡಿಸಿತು. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹಾಗೂ ಪಕ್ಷದ ಪ್ರಮುಖರಾದ ಗೋಪಾಲ ಬಂಗೇರ, ಅಚ್ಚುತ ಪೂಜಾರಿ ಇದ್ದರು.















Leave a Reply