Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾಶಿಯಲ್ಲಿ ಡಾ.ಗೋಪಾಲಾಚಾರ್ಯರಿಗೆ  ವಿದ್ವದ್ಭೂಷಣ ರಾಷ್ಟ್ರೀಯ ಸನ್ಮಾನ

ಅಖಿಲ ಭಾರತೀಯ ವಿದ್ವತ್ ಪರಿಷತ್ ವಾರಣಾಸಿ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ದಿನಾಂಕ  ನವೆಂಬರ್ 8/9 ರಂದು ಎರಡು ದಿನಗಳ ರಾಷ್ಟ್ರೀಯ -ಶೋಧ ಸಂಗೋಷ್ಠಿ ಹಾಗೂ ವಿದ್ವತ್ ಸನ್ಮಾನ ‌ಸಮಾರಂಭವನ್ನು ಆಯೋಜಿಸಲಾಗಿತ್ತು.

ನೇಪಾಳದ ಜಗದ್ಗುರು ಶ್ರೀ ಶಂಕರಾಚಾರ್ಯ ಹೇಮಾನಂದಗಿರಿಜೀ ಹಾಗೂ  ಜಗದ್ಗುರು ಶ್ರೀ  ನಿಂಬಾರ್ಕ ಸಂಪ್ರದಾಯ ಪರಂಪರೆಯ   ಶ್ರೀ ಪದ್ಮನಾಭ ಶರಣ್ ದೇವ್ ಮಹಾರಾಜ್  ಅವರ ಸಾನ್ನಿಧ್ಯದಲ್ಲಿ  ಬಿಹಾರದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ನಿರ್ದೇಶಕರಾದ ಡಾ ಬಿ ಗೋಪಾಲಾಚಾರ್ಯರು  ರಾಷ್ಟ್ರ ಮಟ್ಟದಲ್ಲಿ ಸಲ್ಲಿಸುತ್ತಿರುವ ವಾಙ್ಮಯ ಸೇವೆಯನ್ನು ಗುರುತಿಸಿ ವಿದ್ವದ್ಭೂಷಣ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಭಾರತ ಸರ್ಕಾರದ ಮಾಜಿ ಸಚಿವರು ಹಾಗೂ ಉತ್ತರ ಪ್ರದೇಶದ ಬಿಜೆಪಿ ಪ್ರಧಾನ ಮುಖ್ಯ ಅಧಿಕಾರಿಗಳಾದ ಡಾ ಮಹೇಂದ್ರನಾಥ ಪಾಂಡೇಯ ಹಾಗೂ ಅಖಿಲ ಭಾರತೀಯ ವಿದ್ವತ್ ಪರಿಷತ್ ನ ರಾಷ್ಟ್ರೀಯ ಅಧ್ಯಕ್ಷರಾದ   ಶ್ರೀ ಜಯಶಂಕರ್ ಲಾಲ ತ್ರಿಪಾಠಿ ಮತ್ತು  ಪರಿಷತ್ ನ ರಾಷ್ಟ್ರೀಯ ಮಹಾಸಚಿವರಾದ ಡಾ . ಕಾಮೇಶ್ವರ ಉಪಾಧ್ಯಾಯ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಷ್ಟ್ರದ ವಿವಿಧ ಕ್ಷೇತ್ರಗಳ ವಿದ್ವಾಂಸರನ್ನು ಆಹ್ವಾನಿಸಿ ಗೌರವಿಸಲಾಯಿತು. ದಕ್ಷಿಣ ಭಾರತದಿಂದ ಶ್ರೀ ಪುತ್ತಿಗೆ ಮಠದ ಅಧೀನ ಸಂಸ್ಥೆಯಾದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ  ನಿರ್ದೇಶಕರಾದ ಡಾ ಬಿ ಗೋಪಾಲಾಚಾರ್ಯರು ಪ್ರತಿನಿಧಿಯಾಗಿ ಈ ವಿದ್ವತ್ ಪರಿಷತ್ ನ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸಿದ್ದರು.  ನೇಪಾಳ ಮತ್ತು ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರತೀಯ ಜ್ಞಾನ ಪರಂಪರಾ ರಕ್ಷಣೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಬೇಕಿರುವ ಕಾರ್ಯಸ್ವರೂಪಗಳನ್ನು ನಿರ್ಣಯಿಸಲಾಯಿತು.

Leave a Reply

Your email address will not be published. Required fields are marked *