
ಕೋಟ:ಸಾಸ್ತಾನ ಅನ್ಯೋನ್ಯತಾ ಟೂರಿಸ್ಟ್ ವಾಹನ ಚಾಲಕರ ಹಾಗೂ ಮಾಲಕ ವಾರ್ಷಿಕ ಸಭೆ ಇತ್ತೀಚಿಗೆ ಸಾಸ್ತಾನದ ಮಾಬುಕಳದಲ್ಲಿ ಜರಗಿತು.ಸಭೆ ಅಧ್ಯಕ್ಷತೆಯನ್ನು ಸಂಘದ ಮಹಾಪೋಷಕರಾದ ಡೆರಿಕ್ ಡಿಸೋಜ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ವಿವಿಧ ವಿಷಯಗಳ ಚರ್ಚೆ ನಡೆಯಿತು. ಪ್ರಸ್ತುತ ಅಧ್ಯಕ್ಷ ತ್ಯಾಗರಾಜ್ , ಉಪಾಧ್ಯಕ್ಷ ರೋಲ್ಫಿ ರೂಡ್ರಿಗ್ರಸ್, ಕಾರ್ಯದರ್ಶಿ ಗ್ರೇಗೋರಿ ಪಿಂಟೋ ,ಕೋಶಾಧಿಕಾರಿ ಯೋಗೀಶ್ ಕರ್ಕೇರ ಉಪಸ್ಥಿತರಿದ್ದರು. ಕಾರ್ಯಕ್ರಮ ಗೌರವ ಸಲಹೆಗಾರರಾದ ಬಾಲಕೃಷ್ಣ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.












Leave a Reply