ಊರೊಂದು ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಅಲ್ಲಿರುವ ಸಂಘಸಂಸ್ಥೆಗಳು ಹಾಗೂ ಅದರ ಕಾರ್ಯಚಟುವಟಿಕೆಗಳನ್ನು ನೋಡಬೇಕು. ಮಹಾಲಿಂಗೇಶ್ವರ ದೇವಸ್ಥಾನವು ಕೇವಲ ಧಾರ್ಮಿಕ ಶ್ರದ್ದಾ ಕೇಂದ್ರವಾಗಿರದೆ,ಸಾಂಸ್ಕೃತಿಕ ಚಟುವಟಿಕೆ ಗಳ ಕೇಂದ್ರ ಬಿಂಧುವಾಗಿದ್ದು ಇಲ್ಲಿನ ಕಲಾರಂಗದ ಕಲಾವಿದರು ತಾವು ಬೆಳೆಯುವುದರ ಜೊತೆಗೆ ಕಳೆದ ಎಂಟತ್ತು ವರ್ಷಗಳಿಂದ ತಮ್ಮ ಸುತ್ತಮುತ್ತಲ ಪರಿಸರದ ಸುಮಾರು ಅರವತ್ತಕ್ಕೂ ಮಿಕ್ಕಿ ಮಕ್ಕಳಿಗೆ ಯಕ್ಷ ಶಿಕ್ಷಣ ವನ್ನು ನೀಡುತ್ತಾ ಆ ಮಕ್ಕಳಿಂದ ಪ್ರತಿ ವರ್ಷ ಪ್ರದರ್ಶನವನ್ನು ಏರ್ಪಡಿಸುತ್ತಾ ಬಂದಿರುವುದು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಅಭೂತಪೂರ್ವ ಕೊಡುಗೆಯಾಗಿದ್ದು ಇದನ್ನು ಪದಗಳಲ್ಲಿ ಬಣ್ಣಿಸಲಾಗದೆಂದು ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ,ಲೇಖಕ ಡಾ/ ಪ್ರದೀಪ್ ವಿ.ಸಾಮಗ ಹೇಳಿದರು. ಅವರು ಇತ್ತೀಚೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆ ಇದರ ದೀಪೋತ್ಸವದ ಪ್ರಯುಕ್ತ ಕಲಾರಂಗದ ಬಾಲ ಕಲಾವಿದರಿಂದ ನಡೆದ ಎಂಟನೇ ವರ್ಷದ ಚಿಣ್ಣರ ಒಡ್ಡೋಲಗ ಯಕ್ಷಗಾನದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು.
ಯಕ್ಷಗುರು ದಶಾವತಾರಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರು ತಮ್ಮ ನಿರ್ದೇಶನದಲ್ಲಿ ಕಲಾರಂಗದ ಹಿರಿಯ ಕಲಾವಿದ ನಾಗರಾಜ ಆಚಾರ್ ನೀರ್ಕೋಡ್ಲು ಇವರ ಪ್ರಥಮ ಕಲಾಕೃತಿ ಪಂಚತಂತ್ರ ಆಧಾರಿತ ಚಂದ್ರ ಚಮೂರ ಬಿಡುಗಡೆಗೊಳಿಸಿದರು.ಆಚಾರ್ ರು ರಚಿಸಿದ ಪಂಚತಂತ್ರ ಕೃತಿ ಮಕ್ಕಳ ರಂಗಭೂಮಿಗೆ ಅತ್ಯಮೂಲ್ಯ ಕೃತಿಯಾಗಿದ್ದು, ಮಕ್ಕಳ ಮನಸ್ಸಿನ ಸದಾ ಖುಷಿಕೊಡುವಂತದ್ದು,ಪೋಷಕರ ಪ್ರೋತ್ಸಾಹ ಸದಾ ಕಲಾರಂಗದ ಮೇಲಿರಲಿ ಎಂದರು. ಬಡಗು ತಿಟ್ಟಿನ ಹಿರಿಯ ಅಶಕ್ತ ಹಾಸ್ಯ ಕಲಾವಿದ ನಾಗಪ್ಪ ಹೊಳ್ಮಗೆ ಹಾಗೂ ಪ್ರಸಂಗಕರ್ತ ನಾಗರಾಜ ಆಚಾರ್ ರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಲಾರಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಜನಿ, ಸುಶಾಂತ್, ಸುಪ್ರೀತ್ ರಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಯಿತು. ಕಲಾರಂಗದ ಅಧ್ಯಕ್ಷ ಗುರುಪ್ರಸಾದ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಹಿರಿಯ ಯಕ್ಷಗುರುಗಳಾದ ದೇವದಾಸ್ ರಾವ್ ಕೂಡ್ಲಿ, ಕಂದಾಯ ನಿರೀಕ್ಷಕ ಹಾಗೂ ಆಡಳಿತಾಧಿಕಾರಿ ಮಂಜು ಬಿಲ್ಲವ, ಕೋಟ ಸಿಎ ಬ್ಯಾಂಕ್ ನಿವೃತ್ತ ಪ್ರಬಂಧಕ ವೈಕುಂಠ ಶೆಟ್ಟಿ, ಹಿರಿಯ ಯಕ್ಷ ಕಲಾವಿದ ಸುರೇಶ್ ಆಚಾರ್, ತೀರ್ಥನ್ ಸದಸ್ಯ ಫ್ರೆಂಡ್ಸ್ ವಡ್ಡರ್ಸೆ, ಉಪಸ್ಥಿತರಿದ್ದು. ಕಾರ್ಯದರ್ಶಿ ಪ್ರದ್ಮನಾಭ ಆಚಾರ್ ಬನ್ನಾಡಿ ಸ್ವಾಗತಿಸಿದರು, ಖಜಾಂಚಿ ನಾಗರಾಜ ಆಚಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯ ಪಿಡಿಓ ಸತೀಶ್ ವಡ್ಡರ್ಸೆ ಸನ್ಮಾನ ಪತ್ರ ವಾಚಿಸಿದರು. ಸ್ಥಾಪಕಾಧ್ಯಕ್ಷ ವಿಘ್ನೇಶ್ ಶೆಟ್ಟಿ ಧನ್ಯವಾದಗೈದರು. ಶಿಕ್ಷಕ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಆ ಬಳಿಕ ಬಾಲಕಲಾವಿದರಿಂದ ಚಂದ್ರಚಮೂರ ಹಾಗೂ ಪೌರಾಣಿಕ ಚಿತ್ರಸೇನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.















Leave a Reply