ಹೆಜ್ಜೆ ಗೆಜ್ಜೆ ಫೌಂಡೇಶನ್(ರಿ.)ಉಡುಪಿ ಮಣಿಪಾಲ ಇವರು ನಡೆಸಿದ ರಾಷ್ಟ್ರಮಟ್ಟದ ಏಕವ್ಯಕ್ತಿ ಭರತನಾಟ್ಯ ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಭಕ್ತಿ ನೃತ್ಯ ಸೌರಭ ಹೆಸರಿನಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಈ ಸ್ಪರ್ಧೆ ಗೆ ಕರ್ನಾಟಕ, ತಮಿಳುನಾಡು, ಕೇರಳ ಮಹಾರಾಷ್ಟ್ರ ಮುಂತಾದ ರಾಜ್ಯಗಳ ಒಟ್ಟು 24 ಸ್ಪರ್ಧಿಗಳು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ದಿಶಾ ಗಿರೀಶ್, ಮಂಗಳೂರು (ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಗಾನ ನೃತ್ಯ ಅಕಾಡೆಮಿ ಮಂಗಳೂರು,) ಫಲಕದೊಂದಿಗೆ ರೂ. 10,000 ನಗದು , ಎರಡನೇ ಬಹುಮಾನ ಪಡೆದ ಅನಂತಕೃಷ್ಣ ಸಿ ವಿ, ಮಂಗಳೂರು (ಗುರು ವಿದ್ಯಾಶ್ರೀ ರಾಧಾಕೃಷ್ಣ)ರೂ.7,000 ಹಾಗೂ ಮೂರನೇ ಬಹುಮಾನ ಪಡೆದ ಪ್ರಕೃತಿ ಪಿ ಮೂಡುಬಿದಿರೆ (ವಿದುಷಿ ಸುಖದಾ ಬರ್ವೆ, ಆರಾಧನಾ ನೃತ್ಯ ಕೇಂದ್ರ ಮೂಡುಬಿದಿರೆ)ರೂ. 5000 ನೀಡಲಾಯಿತು. ಸಮಾಧಾನಕರ ಬಹುಮಾನವನ್ನು ಶ್ರೇಷ್ಠಾ ಆರ್ ಉಡುಪಿ. (ಗುರು ವಿದುಷಿ ಮಂಜರಿಚಂದ್ರ ಸೃಷ್ಟಿ ನೃತ್ಯ ಕಲಾಕುಟೀರ, ಉಡುಪಿ)ಮತ್ತು ಯಶಸ್ವೀ ಸನಿಲ್ ಉಡುಪಿ (ಗುರು ವಿದ್ವಾನ್ ಭವಾನಿಶಂಕರ್, ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ, ಉಡುಪಿ)ಪಡೆದರು. ಇದಲ್ಲದೆ ಪ್ರಥಮ ಬಹುಮಾನ ಪಡೆದ ದಿಶಾ ಗಿರೀಶ್ ರವರಿಗೆ *ನೃತ್ಯದಾಸರತ್ನ* ಬಿರುದು ನೀಡಲಾಯಿತು.
ಸ್ಪರ್ಧೆಗೆ ನಿರ್ಣಾಯಕರಾಗಿದ್ದ ವಿದ್ವಾನ್ ಸುಜಯ್ ಶ್ಯಾನಭಾಗ್, ಹುಬ್ಬಳ್ಳಿ ಮತ್ತು ವಿದುಷಿ ಶ್ರೀರಂಜಿನಿ ಉಮೇಶ್ ಬೆಂಗಳೂರುರವರು ದೀಪಪ್ರಜ್ವಲನಮಾಡಿ ಸ್ಪರ್ಧೆಯನ್ನು ಉದ್ಘಾಟಿಸಿದದರು.
ಹೆಜ್ಜೆ ಗೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ, ಸಹ ನಿರ್ದೇಶಕಿ ಹಾಗೂ ಸ್ಪರ್ಧೆಯ ಸಂಯೋಜಕಿ ವಿದುಷಿ ದೀಕ್ಷಾ ರಾಮಕೃಷ್ಣ , ಸಂಚಾಲಕ ಡಾ. ರಾಮಕೃಷ್ಣ ಹೆಗ್ಡೆ , ಸರಿಗಮ ಭಾರತಿ, ಪರ್ಕಳ ನಿರ್ದೇಶಕಿ ವಿದುಷಿ ಶ್ರೀಮತಿ ಉಮಾ ಉದಯ ಶಂಕರ್ ರವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ವಾನ್ ಸುಜಯ್ ಶ್ಯಾನಭಾಗ್ ಮತ್ತು ವಿದುಷಿ ಶ್ರೀರಂಜಿನಿ ಉಮೇಶ್ ರವರನ್ನು ಅವರ ನೃತ್ಯಕಲಾಸಾಧನೆ ಗುರುತಿಸಿ ಸನ್ಮಾನಿಸಲಾಯಿತು.















Leave a Reply