ಬಾಗಲಕೋಟ: ಬರುವ ಡಿ.19, 20, 21 ರಂದು ಮೂರು ದಿನಗಳ ಕಾಲ ನಡೆಯಲಿರುವ “ಚಾಲುಕ್ಯ ಉತ್ಸವ-2025” ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಲಾವಿದರು ಅರ್ಜಿಯಲ್ಲಿ ಸ್ವವಿವರ, ಕಲಾಪ್ರಕಾರ ಸೇರಿದಂತೆ ವಿವರವಾದ ಮಾಹಿತಿಯೊಂದಿಗೆ ಅರ್ಜಿಯನ್ನು ಡಿ.5 ರೊಳಗೆ chalukyautsava@gmail.com ಈ ಮೇಲ್ ಗೆ ಕಳುಹಿಸಿ ಇದರ ಒಂದು ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್ ಕಾರ್ಯಾಲಯ ಬಾದಾಮಿ ಮತ್ತು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಭವನ ನವನಗರ ಬಾಗಲಕೋಟೆ ಇಲ್ಲಿಗೆ ಸಲ್ಲಿಸಬೇಕು ಎಂದು ಬಾಗಲಕೋಟ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















Leave a Reply