Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಇಂಗ್ಲೆಂಡ್ ನ ಪ್ರತಿಷ್ಠಿತ ಬಾತ್ ಯೂನಿವರ್ಸಿಟಿಯಿಂದ ಪಿ.ಹೆಚ್.ಡಿ ಪದವಿ ಪಡೆದ ಹರೀಶ್ ಶೆಟ್ಟಿ ಬಂಡ್ಸಾಲೆ

ಉಡುಪಿ : ಉಡುಪಿ ಜಿಲ್ಲಾ ಬ್ರಹ್ನಾವರ ತಾಲ್ಲೂಕು ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿ ಹರೀಶ್ ಶೆಟ್ಟಿ ಬಂಡ್ಸಾಲೆ ರವರು ಇಂಗ್ಲೆಂಡ್ ನ ಪ್ರತಿಷ್ಠಿತ ಬಾತ್ ಯೂನಿವರ್ಸಿಟಿಯಿಂದ ಪಿ.ಹೆಚ್.ಡಿ ಪದವಿ ಪಡೆದಿರುತ್ತಾರೆ. ಇವರು Home-Work Dynamics in the margins of the Global South ಎಂಬ ವಿಷಯದ ಬಗ್ಗೆ  ಆಳವಾಗಿ ಅಧ್ಯಯನ ನಡೆಸಿ ತಮ್ಮ ಪ್ರಬಂಧವನ್ನು ಮಂಡಿಸಿದ್ದು, ಪ್ರಥಮ ಹಂತದಲ್ಲಿಯೇ ಉತ್ತೀರ್ಣರಾಗಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

ಡಾ. ಹರೀಶ್ ಶೆಟ್ಟಿ ಬಂಡ್ಸಾಲೆಯವರು ಮೂಲತಃ ಉಡುಪಿ ಜಿಲ್ಲಾ ಬ್ರಹ್ಮಾವರ ತಾಲ್ಲೂಕು ಹಾರಾಡಿ ಗ್ರಾಮದ ಕೆಳಬಣಸಾಲೆ ಮನೆ ಶ್ರೀಮತಿ ರತ್ನಾವತಿ ಶೆಟ್ಟಿ ಹಾಗೂ ಹಳುವಳ್ಳಿ- ಕೋಂಟಿಬೈಲು ಲಕ್ಷಣ ಶೆಟ್ಟಿಯವರ ಮಗನಾಗಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾಮಂದಿರ ಹಿರಿಯ ಪ್ರಾಥಮಿಕ‌ ಶಾಲೆ ಹಾರಾಡಿಯಲ್ಲಿ ಕಲಿತು ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಎಸ್.ಎಮ್.ಎಸ್ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಪಡೆದಿರುತ್ತಾರೆ.

ಡಾ. ಎವಿ ಬಾಳಿಗಾ ಕಾಲೇಜಿನಲ್ಲಿ ಬಿ.ಎಸ್. ಡಬ್ಲ್ಯೂ ಮಾಡಿ ನಂತರ ಮಂಗಳೂರಿನ ಡಾ. ಎಮ್.ವಿ ಶೆಟ್ಟಿ ಕಾಲೇಜಿನಲ್ಲಿ ಎಮ್.ಎಸ್.ಡಬ್ಲ್ಯೂ ಪೂರೈಸಿ, ತದನಂತರ ಮ್ಯಾನೇಜಮೆಂಟ್ ವಿದ್ಯಾಸಂಸ್ಥೆಗಳಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿರುವ ಅಹಮ್ಮದಾಬಾದ್ ನ ಐ.ಐ.ಎಮ್ ನಲ್ಲಿ ಪಿ.ಹೆಚ್.ಡಿ ಯನ್ನು ಪ್ರಾರಂಬಿಸಿ ಅಲ್ಲಿಂದ ಇಂಗ್ಲೆಂಡ್ ನ ಪ್ರತಿಷ್ಠಿತ “ಯೂನಿವರ್ಸಿಟಿ ಆಫ್‌ ಬಾತ್” ನಲ್ಲಿ ಸಂಸ್ಥೆಯಿಂದ Scholarship ಪಡೆದು ಕಟ್ಟಡ ಕಾರ್ಮಿಕರ ಬಗ್ಗೆ  ಆಳವಾದ ಅಧ್ಯಯನ ಮಾಡಿ ತಮ್ಮ‌ ಪ್ರಬಂಧವನ್ನು ಮಂಡಿಸಿ, ಯಾವುದೇ ತಿದ್ದುಪಡಿ ಇಲ್ಲದೆ ಮೊದಲ ಹಂತದಲ್ಲೇ ಉತ್ತೀರಣರಾಗಿ ಡಾಕ್ಟರೇಟ್ ಪದವಿಯನ್ನು ಪಡೆದು ಊರಿಗೆ ಕೀರ್ತಿ ತಂದಿರುತ್ತಾರೆ.

Leave a Reply

Your email address will not be published. Required fields are marked *