ಕೋಟ: ಚಿನ್ನದಂಗಡಿಯೊoದರಲ್ಲಿ ನಡೆದ ಬೆಂಕಿ ಅವಘಡವನ್ನು ತಪ್ಪಿಸಿದ ಆಪದ್ಭಾಂವ ಕೋಟದ ಕೇಶವ ಆಚಾರ್ಯ ಅವರಿಗೆ ಚಿನ್ನದ ಪಾರಿತೋಷಕದೊಂದಿಗೆ ಗೌರವಿಸಿದ ಕಾರ್ಯಕ್ರಮ ಕೋಟ-ಸಾಲಿಗ್ರಾಮ ರೋಟರಿ ವಾರದ ಸಭೆಯಲ್ಲಿ ಜರಗಿತು. ರೋಟರಿಕೋಟ- ಸಾಲಿಗ್ರಾಮ ಸದಸ್ಯ ಸೀತಾರಾಮ್ ಆಚಾರ್ಯ ಈ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಿದರು.
ಈ ಸಂದರ್ಭ ಮಾತನಾಡಿದ ಸೀತಾರಾಮ್ ಆಚಾರ್ಯ ಅವರು, ಕಳೆದ ವಾರ ಕೋಟದಲ್ಲಿರುವ ನನ್ನ ಮಾಲಕತ್ವದ ಶ್ರೀದೇವಿ ಜ್ಯುವೆಲರ್ಸ್ನಲ್ಲಿ ವಿದ್ಯುತ್ ಸಮಸ್ಯೆಯಿಂದ ಬೆಂಕಿ ಹತ್ತಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಕೇಶವ ಆಚಾರ್ಯ ಅವರು ನನಗೆ ಕರೆ ಮಾಡಿ ವಿಷಯ ತಿಳಿಸಿದ್ದರು, ಹಾಗೂ ನನ್ನೊಂದಿಗೆ ಜೀವದ ಹಂಗು ತೊರೆದು ಬೆಂಕಿಯನ್ನು ನಂದಿಸಿ ಇಡೀ ಅಂಗಡಿ ಬೆಂಕಿಗಾಹುತಿಯಾಗುವುದನ್ನು ಲಕ್ಷಾಂತರ ರೂ. ನಷ್ಟವಾಗುದನ್ನು ತಪ್ಪಿಸಿದ್ದರು ಎಂದರು.
ಇವರು ಕೋಟದ ಪಂಚವರ್ಣ ಸಂಘಟನೆ,ಜೆಸಿಐ ಕೋಟ ಇನ್ನಿತರ ಸಂಘಸoಸ್ಥೆಗಳಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದು ಗಮನಾರ್ಹವಾಗಿದೆ. ಈ ಸಂದರ್ಭ ರೋಟರಿ ಅಧ್ಯಕ್ಷ ಯೋಗೇಶ್ ಕುಮಾರ್, ಕಾರ್ಯದರ್ಶಿ ಶರಣಯ್ಯ ಹಿರೇಮಠ, ಹಿರಿಯ ಸದಸ್ಯರಾದ ರಾಜೇಂದ್ರ ಸುವರ್ಣ, ಬಾಲಕೃಷ್ಣ ಶೆಟ್ಟಿಇದ್ದರು.
ಚಿನ್ನದಂಗಡಿಯೊoದರಲ್ಲಿ ನಡೆದ ಬೆಂಕಿ ಅವಘಡವನ್ನು ತಪ್ಪಿಸಿದ ಕೇಶವ ಆಚಾರ್ಯ ಅವರಿಗೆ ಸಮ್ಮಾನ ಕಾರ್ಯಕ್ರಮ ನೆರವೆರಿತು. ರೋಟರಿ ಅಧ್ಯಕ್ಷ ಯೋಗೇಶ್ ಕುಮಾರ್, ಕಾರ್ಯದರ್ಶಿ ಶರಣಯ್ಯ ಹಿರೇಮಠ, ಹಿರಿಯ ಸದಸ್ಯರಾದ ರಾಜೇಂದ್ರ ಸುವರ್ಣ, ಬಾಲಕೃಷ್ಣ ಶೆಟ್ಟಿಇದ್ದರು.














Leave a Reply