ಕೋಟ: ಇಲ್ಲಿನ ಚೇತನ ಪ್ರೌಢಶಾಲೆ ಹಂಗಾರಕಟ್ಟೆ ವಾರ್ಷಿಕ ಕ್ರೀಡಾಕೂಟ ಹಾಗೂ ದಿವಂಗತ ರಾಮಕೃಷ್ಣ ಮಂಜರ ಸ್ಮರಣಾರ್ಥ ಸ್ಥಳೀಯ ಏಳು ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟ ಗುರುವಾರ ಶಾಲಾ ವಠಾರದಲ್ಲಿ ಜರಗಿದವು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಹೆಚ್.ಇಬ್ರಾಹಿಂ ಸಾಹೇಬ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಫಾರ್ಚುನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ಮುಂಬೈ ಇದರ ನಿರ್ದೇಶಕ ಜೋಸೆಫ್ ಮೆನೇಜಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪದವಿ ಪೂರ್ವ ಶಿಕ್ಷಣ ಬೆಂಗಳೂರು ನಿವೃತ್ತ ಸಹಾಯಕ ನಿರ್ದೇಶಕ ಸಿ. ಸುರೇಶ್ ತುಂಗಾ ಧ್ವಜಾರೋಹಣ ಗೈದರು.
ಬ್ರಹ್ಮಾವರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ವಂದನಾ ಸ್ವೀಕಾರ ಕಾರ್ಯಕ್ರಮ ನೆರವೆರಿಸಿದರು.
ಐರೋಡಿ ಕರ್ಣಾಟಕ ಬ್ಯಾಂಕ್ ಪ್ರಭಂಧಕ ಮಂಜುನಾಥ ಶೇಟ್ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿದರು.
ಮುಖ್ಯ ಅತಿಥಿಗಳಾಗಿ ಫಾರ್ಚುನ್ ಅಕಾಡೆಮಿಕ್ ಆಫ್ ಹೆಲ್ತ್ ಸೈನ್ಸ್ ಚೇರಮೆನ್ ತಾರನಾಥ ಶೆಟ್ಟಿ, ಸಕಾಲಿಕ ಎಂಟರ್ಪೆ್ರöÊಸಸ್ ಹಂಗಾರಕಟ್ಟೆ ಮಾಲಿಕ ಗೋಪಾಲಕೃಷ್ಣ ಉಡುಪ, ಸರ್ವೆ ಸೂಪರ್ವೈಸರ್ ನಿವೃತ್ತ ಅಧಿಕಾರಿ ರಾಮಕೃಷ್ಣ ಚಡಗ, ಹೊಸಬದುಕು ಆಶ್ರಮದ ಮುಖ್ಯಸ್ಥ ವಿನಯ ಚಂದ್ರ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ನಿಮೃತ್ತ ಮುಖ್ಯ ಶಿಕ್ಷಕ ಗಣೇಶ್ .ಜಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಾಲಿನಿ , ಆಡಳಿತ ಮಂಡಳಿ ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಮಾಜಿ ಅಧ್ಯಕ್ಷ ಮನೋಜ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಚಂದ್ರ ವಂದಿದರು.
ಇಲ್ಲಿನ ಚೇತನ ಪ್ರೌಢಶಾಲೆ ಹಂಗಾರಕಟ್ಟೆ ವಾರ್ಷಿಕ ಕ್ರೀಡಾಕೂಟ ಹಾಗೂ ದಿವಂಗತ ರಾಮಕೃಷ್ಣ ಮಂಜರ ಸ್ಮರಣಾರ್ಥ ಸ್ಥಳೀಯ ಏಳು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಗುರುವಾರ ಶಾಲಾ ವಠಾರದಲ್ಲಿ ಜರಗಿದವು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಹೆಚ್.ಇಬ್ರಾಹಿಂ ಸಾಹೇಬ್, ಫಾರ್ಚುನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ಮುಂಬೈ ಇದರ ನಿರ್ದೇಶಕ ಜೋಸೆಫ್ ಮೆನೇಜಸ್, ಪದವಿ ಪೂರ್ವ ಶಿಕ್ಷಣ ಬೆಂಗಳೂರು ನಿವೃತ್ತ ಸಹಾಯಕ ನಿರ್ದೇಶಕ ಸಿ. ಸುರೇಶ್ ತುಂಗಾ ಇದ್ದರು.














Leave a Reply