ಕೋಟ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕದ ವಿಶೇಷ ಕಾರ್ಯಕ್ರಮ ಸಾಹಿತ್ಯ ಪ್ರೇರಣೆ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಬೆಂಗ್ರೆ ಇಲ್ಲಿ ಜರಗಿತು.
ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾಹಿತ್ಯ ಪ್ರೇರಣೆಯ ಉದ್ದೇಶ ಮೌಲ್ಯ ಆಧಾರಿತ ಶಿಕ್ಷಣ, ವಿದ್ಯಾರ್ಥಿಗಳಲ್ಲಿ ನೈತಿಕ ಶಕ್ತಿ, ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳ ಮಹತ್ವ, ಸೃಜನಶೀಲತೆಯನ್ನು ಬೆಳೆಸುವಲ್ಲಿ ಸಹಕಾರವಾಗುತ್ತದೆ ಎಂದು ತಿಳಿಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಿಯಾನ ಅಧ್ಯಕ್ಷತೆ ವಹಿಸಿದ್ದರು.
ಸಾಹಿತ್ಯ ಪರಿಷತ್ ಸದಸ್ಯರಾದ ನಾಗೇಶ ಮಯ್ಯ ಕಥೆ ಕವನ ರಚನೆಯ ಬಗ್ಗೆ ವಿವರಿಸಿದರು. ಸುಪ್ರೀತಾ ಪುರಾಣಿಕ್, ಪ್ರಿಯಾ ಬ್ರಹ್ಮಾವರ, ತನುಜ ಕೋಟೇಶ್ವರ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಕಥೆ,ಕವನ, ನೃತ್ಯ, ಯಕ್ಷಗಾನ ಮೂಲಕ ಅಭಿನಯಿಸಿ ಅವುಗಳ ಮಹತ್ವವನ್ನು ತಿಳಿಸಿದರು.
ಸಾಹಿತ್ಯ ಪರಿಷತ್ ಕೋಟ ಹೋಬಳಿ ಅಧ್ಯಕ್ಷ ಅಚ್ಯುತ ಪೂಜಾರಿ ಕನ್ನಡದ ಪದ್ಯಗಳನ್ನು ಹಾಡಿ ಮಕ್ಕಳಲ್ಲಿ ಜಾಗೃತೆ ಮೂಡಿಸಿದರು.,ಶಾಲಾ ಮುಖ್ಯ ಶಿಕ್ಷಕಿ ಕಲ್ಪನಾ ಸ್ವಾಗತಿಸಿ ಭಾಷಾಭಿವೃದ್ದಿ, ಸೃಜನಶೀಲ ಸಾಹಿತ್ಯ ಸೃಷ್ಟಿ, ಕನ್ನಡ ಮನಸುಗಳನ್ನು ಅರಳಿಸುವ ಅಪೂರ್ವ ಅವಕಾಶ ಮಾಡಿಕೊಟ್ಟ ಕ ಸಾ ಪ ಬ್ರಹ್ಮಾವರ ತಾಲೂಕು ಘಟಕವನ್ನು ಶ್ಲಾಘಿಸಿದರು. ಸಾಮಾಜಿಕ ಜಾಲತಾಣ ಮಿತ್ರ ನರಸಿಂಹಮೂರ್ತಿ ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ಪದ್ಮಾವತಿ ವಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕದ ವಿಶೇಷ ಕಾರ್ಯಕ್ರಮ ಸಾಹಿತ್ಯ ಪ್ರೇರಣೆ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಬೆಂಗ್ರೆ ಇಲ್ಲಿ ಜರಗಿತು. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ,ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಿಯಾನ, ಸುಪ್ರೀತಾ ಪುರಾಣಿಕ್, ಪ್ರಿಯಾ ಬ್ರಹ್ಮಾವರ, ತನುಜ ಕೋಟೇಶ್ವರ ಇದ್ದರು.
















Leave a Reply