Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಡ್ಡರ್ಸೆ- ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣೆ, ಆಯುಷ್ಮಾನ್ ಆರೋಗ್ಯ ಕಾರ್ಡ್ ಮತ್ತು ವಯೋವಂದನ ಕಾರ್ಡ್ ಸೃಜನೆ ಕಾರ್ಯಕ್ರಮ

ಕೋಟ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರಕಾರಿ ನೇತ್ರ ಘಟಕ ಉಡುಪಿ, ಗ್ರಾಮ ಪಂಚಾಯತ್ ವಡ್ಡರ್ಸೆ, ಸಮುದಾಯ ಆರೋಗ್ಯ ಕೇಂದ್ರ ಎನ್‌ಸಿಡಿ ಘಟಕ ಕೋಟ, ಪ್ರಸಾದ್ ನೇತ್ರಾಲಯ ಉಡುಪಿ, ಗ್ರಾಮ ಒನ್ ವಡ್ಡರ್ಸೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೈಬ್ರಕಟ್ಟೆ,ಆಯುಷ್ಮಾನ್ ಆರೋಗ್ಯ ಕೇಂದ್ರ ಅಚ್ಲಾಡಿ,ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣೆ, ಆಯುಷ್ಮಾನ್ ಆರೋಗ್ಯ ಕಾರ್ಡ್ ಮತ್ತು ವಯೋವಂದನ ಕಾರ್ಡ್ ಸೃಜನೆ ಕಾರ್ಯಕ್ರಮವು ಬುಧವಾರ ವಡ್ಡರ್ಸೆ ಗ್ರಾ.ಪಂ ವ್ಯಾಪ್ತಿಯ ಎಂ.ಜಿ ಕಾಲೋನಿ ಅಂಗನವಾಡಿಯಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಹೇಬರಕಟ್ಟೆ ಇಲ್ಲಿನ ವೈದ್ಯಾಧಿಕಾರಿ ಡಾ. ವಿಶ್ವನಾಥ್.ಬಿ ಮನುಷ್ಯನ ದೇಹದಲ್ಲಿ ಆರೋಗ್ಯ ಎಂಬುವುದು ಬಹುಮುಖ್ಯವಾದದ್ದು ಅದರಲ್ಲಿ ಕಣ್ಣು ವಿಶೇಷ ಸ್ಥಾನ ಪಡೆದುಕೊಂಡಿದೆ,ಇತ್ತೀಚಿಗಿನ ವರ್ಷಗಳಲ್ಲಿ ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳ ಆರೋಗ್ಯ ಕಾಯ್ದು ಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದ ಅವರು ನಮ್ಮ ಆಹಾರ ಕ್ರಮ,ಮೊಬೈಲ್ ಅತಿ ಹೆಚ್ಚು ಬಳಕೆಯಿಂದ ಕಣ್ಣಿನ ಮೇಲಾಗುವ ದುಶ್ಚಪರಿಣಾಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ವಡ್ಡರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪಿಡಿಒ ಜಯರಾಮ ಶೆಟ್ಟಿ,ಸದಸ್ಯ ಕೆ ಪಿ ಕೋಟಿ ಪೂಜಾರಿ,  ಹರೀಶ್ ಶೆಟ್ಟಿ, ಪಾರ್ವತಿ ದೇವಾಡಿಗ,ಕೋಟದ ಸಮುದಾಯ ಆರೋಗ್ಯ ಕೇಂದ್ರ ಎನ್‌ಸಿಡಿ ಘಟಕದ ವೈದ್ಯಾಧಿಕಾರಿ ಡಾ. ಯಶಶ್ರೀ,ಪ್ರಸಾದ್ ನೇತ್ರಾಲಯದ ಡಾ. ನಿರಂಜನ್,ಸಮುದಾಯ ಆರೋಗ್ಯ ಅಧಿಕಾರಿ ಮಮತಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋಧ,ಆಶಾ ಕಾರ್ಯಕರ್ತೆಯ ಗುಲಾಬಿ ಮತ್ತು ಭವಾನಿ,ಅಂಗನವಾಡಿ ಕಾರ್ಯಕರ್ತೆ ಅನಿತಾ ಸಹಾಯಕಿ ಸೌಲತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಡ್ಡರ್ಸೆ ಗ್ರಾ.ಪಂ ವ್ಯಾಪ್ತಿಯ ಎಂ.ಜಿ ಕಾಲೋನಿ ಅಂಗನವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣೆ, ಆಯುಷ್ಮಾನ್ ಆರೋಗ್ಯ ಕಾರ್ಡ್ ಮತ್ತು ವಯೋವಂದನ ಕಾರ್ಡ್ ಸೃಜನೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಹೇಬರಕಟ್ಟೆ ಇಲ್ಲಿನ ವೈದ್ಯಾಧಿಕಾರಿ ಡಾ. ವಿಶ್ವನಾಥ್.ಬಿ ಮಾಹಿತಿ ನೀಡಿದರು. ಪಿಡಿಒ ಜಯರಾಮ ಶೆಟ್ಟಿ, ಸದಸ್ಯ ಕೆ ಪಿ ಕೋಟಿ ಪೂಜಾರಿ,  ಹರೀಶ್ ಶೆಟ್ಟಿ, ಪಾರ್ವತಿ ದೇವಾಡಿಗ, ಕೋಟದ ಸಮುದಾಯ ಆರೋಗ್ಯ ಕೇಂದ್ರ ಎನ್‌ಸಿಡಿ ಘಟಕದ ವೈದ್ಯಾಧಿಕಾರಿ ಡಾ. ಯಶಶ್ರೀ ಇದ್ದರು.

Leave a Reply

Your email address will not be published. Required fields are marked *