

ಕುಂದಾಪುರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ನೂತನ ನ್ಯಾಯಾಧೀಶರಾಗಿ ಆಗಮಿಸಿದ ಶ್ರೀಮತಿ ಶುೃತಿ ಎಸ್ ಇವರನ್ನು ಕುಂದಾಪುರ ಬಾರ್ ಅಸೋಸಿಯೇಷನ್ ಇದರ ವತಿಯಿಂದ ಸ್ವಾಗತಿಸಲಾಯಿತು.

ಕುಂದಾಪುರ ವಕೀಲರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆಯವರು ನೂತನ ನ್ಯಾಯಾಧೀಶರಿಗೆ ಪುಷ್ಪಗುಚ್ಚವನ್ನು ನೀಡುವ ಮೂಲಕ ಸ್ವಾಗತಿಸಿದರು.

ಈ ಸಮಾರಂಭದಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಅಬ್ದುಲ್ ರಹೀಮ್ ಹುಸೇನ್ ಶೇಖ್, ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್, ಕುಂದಾಪುರದ ಹೆಚ್ಚುವರಿ ಸಿವಿಲ್ & ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಶ್ರೀಮತಿ ರೋಹಿಣಿ ಡಿ ಹಾಗೂ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೊಸೆಫ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಜತೆ ಕಾರ್ಯದರ್ಶಿ ರಿತೇಶ್ ಬಿ ಉಪಸ್ಥಿತರಿದ್ದರು.
ಸರಕಾರಿ ಸಹಾಯಕ ಅಭಿಯೋಜಕರಾದ ಶ್ರೀಮತಿ ಉಮಾ ನಾಯ್ಕ, ಶ್ರೀಮತಿ ಅಮ್ರೀನ್ ಸುಹಾನ್ ಹಾಗೂ ಹಿರಿಯ, ಕಿರಿಯ ಹಾಗೂ ಮಹಿಳಾ ವಕೀಲರುಗಳು ಹಾಜರಿದ್ದರು. ವಕೀಲರಾದ ಮಂಜುನಾಥ ಅರಾಟೆ ನಿರೂಪಿಸಿದ ಕಾರ್ಯಕ್ರಮದಲ್ಲಿ ವಕೀಲರಾದ ನಾಗರಾಜ್ ರಾವ್ ಪ್ರಾರ್ಥಿಸಿದರು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ಧನ್ಯವಾದವಿತ್ತರು.