• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ನಿರಂತರವಾಗಿ ಕಲಿಸುವ ಸಂಸ್ಥೆಗೆ ಯಶಸ್ವೀ ಸಂಸ್ಥೆ ಮಾದರಿ: ಅನಂತ್ ನಾಯಕ್ ತೆಕ್ಕಟ್ಟೆ

ByKiran Poojary

May 26, 2023

ಕೋಟ: ಹಲವಾರು ಕಲಾ ಪ್ರತಿಭೆಗಳು ಕಳೆದ ಹಲವಾರು ವರ್ಷಗಳಿಂದ ಯಶಸ್ವೀ ಕಲಾವೃಂದದ ನೆರಳಿನಲ್ಲಿ ಹುಟ್ಟಿ ಅನಾವರಣಗೊಳ್ಳುತ್ತಿದೆ. ಇಂತಹ ಪ್ರತಿಭೆಗೆ ಪ್ರೋತ್ಸಾಹಿಸುವ ಕಲಾ ಮನಸ್ಸುಗಳು ಈ ಕಾಲದಲ್ಲಿ ವಿರಳ. ನೂರಾರು ವಿದ್ಯಾರ್ಥಿಗಳು ಯಶಸ್ವೀ ಸೂರಿನಡಿಯಲ್ಲಿ ನಿರಂತರ ಕಲಿಕೆಯಿಂದ ಸಮಾಜವನ್ನು ಬೆಳಗುತ್ತಿದ್ದಾರೆ. ಇಂತಹ ಸಂಸ್ಥೆ ಜಗತ್ತಿನಾದ್ಯಂತ ಸಾವಿರವಾಗಲಿ ಎಂದು ಉದ್ಯಮಿ ಅನಂತ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ಸಂಯೋಜನೆಯಲ್ಲಿ ‘ರಜಾರಂಗು-ರಂಗಮಂಚ’ ಬೇಸಿಗೆ ಶಿಬಿರದಲ್ಲಿ ಮೇ 22ರಂದು ಗಣೇಶ್ ಸಿಲ್ಕ್ಸ್ ಮಾಲಕ ಅನಂತ ನಾಯಕ್ ಶಿಬಿರವನ್ನುದ್ದೇಶಿಸಿ ಮಾತನ್ನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿವಮೊಗ್ಗ ರಂಗಾಯಣ ಕಲಾವಿದ ಶ್ರೀಶ ಭಟ್ ತೆಕ್ಕಟ್ಟೆ, ಕೈಲಾಸ ಕಲಾಕ್ಷೇತ್ರದ ಸದಸ್ಯ ವಿಜಿತ್ ಮಲ್ಯಾಡಿ ಉಪಸ್ಥಿತರಿದ್ದರು.
ಮಾ| ಆರ್ಯನ್ ಕಾರ್ಯಕ್ರಮ ನಿರ್ವಹಿಸಿ, ಕು| ಪರಿಣಿತ ವರದಿ ಸಲ್ಲಿಸಿ, ಕು| ಹರ್ಷಿತ ಧನ್ಯವಾದಗೈದರು. ಬಳಿಕ ಸ್ಟಿಕ್ ಪೆಯಿಂಟಿಂಗ್ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಶ ಭಟ್ ನೆರವೇರಿಸಿಕೊಟ್ಟರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ಸಂಯೋಜನೆಯಲ್ಲಿ ‘ರಜಾರಂಗು-ರಂಗಮಂಚ’ ಬೇಸಿಗೆ ಶಿಬಿರದಲ್ಲಿ ಮೇ 22ರಂದು ಗಣೇಶ್ ಸಿಲ್ಕ್ಸ್ ಮಾಲಕ ಅನಂತ ನಾಯಕ್ ಶಿಬಿರವನ್ನುದ್ದೇಶಿಸಿ ಮಾತನ್ನಾಡಿದರು.

Leave a Reply

Your email address will not be published. Required fields are marked *