

ಮುಖದ ಭಾವನೆಯನ್ನು ಮುಖವಾಡದ ತಯಾರಿ ಮೂಲಕ ಬಿಂಬಿಸೋಣ: ಅಶೋಕ್ ತೆಕ್ಕಟ್ಟೆ
ಕೋಟ: ಆತ್ಮ ವಿಶ್ವಾಸಗಳನ್ನು ಪ್ರಚೋದಿಸು ಕಾರ್ಯ ಶಿಬಿರದಂತಹ ತರಗತಿಗಳ ಮೂಲಕ ಆಗುತ್ತದೆ. ಆತ್ಮವಿಶ್ವಾಸಗಳೇ ಬದುಕಿಗೆ ಯಶಸ್ಸನ್ನು ಕಲ್ಪಿಸುತ್ತದೆ. ವೇದಿಕೆಯಲ್ಲಿ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಧೈರ್ಯ, ಸ್ತೈರ್ಯಗಳು ಜಾಗೃತವಾಗುತ್ತದೆ. ಇವು ಜೀವನ ನಡೆಸುವುದಕ್ಕೆ ಅತ್ಯಧಿಕ ಪ್ರಾಮುಖ್ಯವಾಗಿರುತ್ತದೆ ಎಂದು ಗೋಪಾಲ ಪೂಜಾರಿ ವ್ಯಕ್ತಪಡಿಸಿದರು. ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ‘ರಜಾರಂಗು-ರಂಗಮಂಚ’ ಶಿಬಿರದ 12ನೇ ದಿನದಲ್ಲಿ ಮೇ 25ರಂದು ಮಕ್ಕಳನ್ನು ಉದ್ದೇಶಿಸಿ ಮಾತನ್ನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬಹುಬಗೆಯ ಕಲಾ ಚತುರ ಅಶೋಕ್ ತೆಕ್ಕಟ್ಟೆ ಉಪಸ್ಥಿತರಿದ್ದು ಮುಖವಾಡ ರಚನೆಯ ಸೂಕ್ಷ್ಮತೆಗಳನ್ನು ಎಳೆಎಳೆಯಾಗಿ ಬಿಡಿಸಿ ರಚಿಸಿ ಮುಖದ ಭಾವನೆಗಳನ್ನು ಮುಖವಾಡದ ತಯಾರಿ ಮೂಲಕ ಬಿಂಬಿಸೋಣ ಎಂದು ಮಕ್ಕಳನ್ನು ಹುರಿದುಂಬಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ವಹಿಸಿದ್ದರು. ಮಾ| ಪವನ್ ಕಾರ್ಯಕ್ರಮ ನಿರ್ವಹಿಸಿದರು. ಕು| ಆರಬಿ ಪರಿಚಯಿಸಿ, ಮಾ| ತನ್ಮಯ ಸ್ವಾಗತಿಸಿದರು.
ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ‘ರಜಾರಂಗು-ರಂಗಮಂಚ’ ಶಿಬಿರದ 12ನೇ ದಿನದ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬಹುಬಗೆಯ ಕಲಾ ಚತುರ ಅಶೋಕ್ ತೆಕ್ಕಟ್ಟೆ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು.