ನಮ್ಮ ದೇಶದ ಪ್ರಧಾನಿ ವಿಶ್ವನಾಯಕ ನರೇಂದ್ರ ಮೋದಿಯವರ 73 ನೇ ಜನ್ಮ ದಿನಾಚರಣೆ ಅಂಗವಾಗಿ ಅಂಬಲಪಾಡಿ ಗ್ರಾಮ ಪಂಚಾಯತ್ ನ ಪೌರ ಕಾರ್ಮಿಕರಿಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷರು/ಉಪಾಧ್ಯಕ್ಷರು, ಸದಸ್ಯರು & ಪಕ್ಷದ ವತಿಯಿಂದ ಗೌರವ ಸನ್ಮಾನ ಮತ್ತು ಬಂಕೇರಕಟ್ಟ ಅಂಗನವಾಡಿ, ಪಂದುಬೆಟ್ಟು ಅಂಗನವಾಡಿ & ಪಂಚಾಯತ್ ಸಿಬ್ಬಂದಿಗಳಿಗೆ ಸಿಹಿತಿಂಡಿ ಹಂಚುವ ಮೂಲಕ ಆಚರಿಸಲಾಯಿತು.
ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷಿ ಯಶಸ್ವೀ ಯೋಜನೆ “ಸ್ವಚ್ಚ ಭಾರತ್”.ಭಾರತದ ಜನತೆಯ ಮೆಚ್ಚಿನ ಪ್ರಧಾನಿಯವರ ಈ ಜನ್ಮ ದಿನಾಚರಣೆಯ ಶುಭ ಸಂಧರ್ಭದಲ್ಲಿ ಮೋದಿ ಉತ್ಸವ ಸಮಿತಿಯ ಸಲಹೆಯಂತೆ ಸ್ವಚ್ಚ ಭಾರತ ಯೋಜನೆಯ ಯಶಸ್ಸಿನ ಪ್ರಮುಖ ರೂವಾರಿಗಳಾದ ಪೌರ ಕಾರ್ಮಿಕರ ಗೌರವ ಕೊಡುವ ಅರ್ಥಪೂರ್ಣ ಕಾರ್ಯಕ್ರಮ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಯೋಗೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಸುಜಾತ ಸುಧಾಕರ್ ಅವರ ನೇತೃತ್ವದಲ್ಲಿ ನಡೆಯಿತು. ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇರಕಟ್ಟ, ಪಂದುಬೆಟ್ಟು ಅಂಗನವಾಡಿ ಮಕ್ಕಳಿಗೆ & ನಮ್ಮ ಪಂಚಾಯತ್ ಸಿಬ್ಬಂದಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ರೋಹಿಣಿ ಎಸ್ ಪೂಜಾರಿ ಮತ್ತು ಮಾಜಿ ಉಪಾಧ್ಯಕ್ಷರಾದ ಸೋಮನಾಥ್ ಬಿ.ಕೆ. ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಶ್ ಸುವರ್ಣ, ಹರೀಶ್ ಪಾಲನ್, ಪ್ರಮೋದ್ ಸಾಲಿಯಾನ್, ಸುಂದರ ಪೂಜಾರಿ, ಉಷಾ ಶೆಟ್ಟಿ, ಸುಮಂಗಲಾ, ಸಬಿತಾ, ಶಕುಂತಳಾ ಶೆಟ್ಟಿ, ಶಶಿಧರ್ ಸುವರ್ಣ, ಭಾರತಿ ಭಾಸ್ಕರ್, ಸುನಿಲ್ ಕುಮಾರ್ ಕಪ್ಪೆಟ್ಟು, ಶುಭಾಶಿನಿ,ಕುಸುಮಾ ಕಿಶೋರ್ ಉಪಸ್ಥಿತರಿದ್ದರು.