

ರಾಮನ ಹೆಜ್ಜೆಯಲ್ಲಿ ನರೇಂದ್ರನ ನಡೆ – ವಿಜಯ ಕೊಡವೂರು
ಶ್ರೀ ಶ್ರೀ ಶ್ರೀ ಪರ್ಯಾಯ ಕೃಷ್ಣಾಪುರ ಮಠ, ಉಡುಪಿ
ಮೋದಿ ಉತ್ಸವ ಸಮಿತಿ, ಉಡುಪಿ ಜಿಲ್ಲೆ. ಡಾಟ್ ಪ್ರಿಂಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಶ್ರೀ ನರೇಂದ್ರ ಮೋದಿಜೀಯವರ 73ನೇ ಜನ್ಮ ದಿನದ ಪ್ರಯುಕ್ತ ” “ಮೋದಿ ಉತ್ಸವ -2023” ಕಾರ್ಯಕ್ರಮವು ರಾಜಾಂಗಣದಲ್ಲಿ 17-09-2023 ರಂದು ನಡೆಯಿತು.
ದೇಶ ಕಂಡ ಬಲಿಷ್ಠ ದೇಶಭಕ್ತ ಪ್ರಧಾನಮಂತ್ರಿ ವಿಶ್ವನಾಯಕ ಆಗಿರುವಂತಹ ಶ್ರೀ ನರೇಂದ್ರ ಮೋದಿಜೀ ಅವರ 73ನೇ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ "ಮೋದಿ ಉತ್ಸವ ಸಮಿತಿ" ಯನ್ನು ರಚಿಸಿಕೊಂಡು ಅನೇಕ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ಯೋಚಿಸುತ್ತಾ ಉಡುಪಿ ಜಿಲ್ಲೆಯಾದ್ಯಂತ ಅನೇಕ ಸೇವಾ ಕಾರ್ಯಗಳು ನಡೆಯುತ್ತಿವೆ. ಈ ಮುಖಾಂತರ ಉಡುಪಿ ಜಿಲ್ಲೆಯ 500ಕ್ಕೂ ಹೆಚ್ಚು ಅಂಗನವಾಡಿ ಗಳಿಗೆ ಸಿಹಿ ತಿಂಡಿ ವಿತರಣೆ ಮಾಡುವ ಕಾರ್ಯ ನಡೆದಿದೆ.
ಅತೀ ಹೆಚ್ಚಿನ ಪೌರಕಾರ್ಮಿಕ ರಿಗೂ ಸನ್ಮಾನ, ಶಿಕ್ಷಕರಿಗೂ ಸನ್ಮಾನ ಮಾಡುವ ಕಾರ್ಯ, ಹೀಗೆ ಹಲವು ರೀತಿಯ ಸೇವಾ ಕಾರ್ಯ ನಡೆಯುತ್ತಿದೆ. ಹಾಗೂ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನ ಬೆಳಿಗ್ಗೆ ಹೆಜಮಾಡಿ ಟೋಲ್ ಗೇಟ್ ನಿಂದ ಶಿರೂರು ಟೋಲ್ ಗೇಟ್ ನವರೆಗೆ ಬರುವಂತಹ ಅಷ್ಟೂ ಬಸ್ ನಿಲ್ದಾಣವನ್ನು ಸ್ವಚ್ಚ ಮಾಡುವ ಕಾರ್ಯವು ನಡೆದಿದೆ.
ಈ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆ ವಿಷಯದಲ್ಲಿ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ, ಹಾಗೂ ನರೇಂದ್ರ ಮೋದಿಯ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆ ವಿಜಯ್ ಕೊಡವೂರು... ಶ್ರೀ ರಾಮ ಬದುಕಿದಂತೆ ಬದುಕಿದವರು ನರೇಂದ್ರ ಮೋದಿಯವರು, ರಾಮನ ತಂದೆ ತಾಯಿಯ ಮಾತಿಗೋಸ್ಕರ ಅದಷ್ಟು ವರ್ಷ ಕಾಡಿಗೆ ಹೋಗಿ ಧರ್ಮ ಯುದ್ಧದ ಮುಖಾಂತರ ಜಯಿಸಿ ಬಂದಿದ್ದಾರೆ. ಹತ್ತು ತಲೆಯ ಶೂರ್ಪನಕಿಯ ರಾಕ್ಷಸರೊಂದಿಗೆ ಹೋರಾಟ ಮಾಡಿದ್ದಾರೆ.
ಅದೇ ರೀತಿ ನರೇಂದ್ರ ಮೋದಿಯ ಬದುಕು ಕಾಣುತ್ತಾ ಇದೆ. ತಂದೆ ತಾಯಿಯ ಮಾತಿನಂತೆ ರಾಮ ಕಾಡಿಗೆ ಹೋದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ ಒಂದು ಸಂಸ್ಕಾರಯುತವಾದ ಮಾತಿಗೋಸ್ಕರ ತನ್ನ ಎಲ್ಲಾ ಬದುಕನ್ನು ಬಿಟ್ಟು ಸಮಾಜಕ್ಕೋಸ್ಕರ ಬದುಕಿದ ನರೇಂದ್ರ. ಇವರ ಹುಟ್ಟುಹಬ್ಬ ಮಾಡುವುದೇ ಒಂದು ಹೆಮ್ಮೆಯ ಪುಣ್ಯ ಕಾರ್ಯ. ಇದೇ ರೀತಿ ಕೇವಲ ನಾವು ನರೇಂದ್ರ ಮೋದಿಯ ಹೆಸರನ್ನು ಹೇಳುತ್ತಾ ಬದುಕುವುದಕ್ಕಿಂತ, ನಾವು ನರೇಂದ್ರ ಮೋದಿ ಆಗಬೇಕು ಅನ್ನುವುದನ್ನು ಸಂಕಲ್ಪ ಮಾಡಿಕೊಳ್ಳಬೇಕಾಗಿದೆ ಎಂದು ವಿಜಯ ಕೊಡವೂರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯ ಕೂಡಾ ನಡೆಯಿತು ಮತ್ತು ಅನೇಕ ಸೇವಾ ಕಾರ್ಯಗಳನ್ನು ಮಾಡುವ ಮುಖಾಂತರ ನಾವು ಈ ರಾಜ್ಯಕ್ಕೆ ಮಾದರಿ ಆಗಬೇಕು ಎಂದರು.
