ಕೋಟ: ತಳ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವಿದ್ಯುತ್ ಕಾರ್ಮಿಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕಾದ ಅಗತ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಶೆಣೈ ಹೇಳಿದರು.
ಕೋಟದ ನೂತನವಾಗಿ ಸಂಘಟಿತಗೊಂಡ ವಿದ್ಯುತ್ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಮಾತನಾಡಿ ವಿದ್ಯುತ್ ಗುತ್ತಿಗೆದಾರರಿಗೆ ಬೇಕಾದ ತರಬೇತಿಯನ್ನು ನಮ್ಮ ಸಂಸ್ಥೆಯಿಂದ ಆಯೋಜಿಸುವ ಬರವಸೆ ನೀಡಿದರಲ್ಲದೆ ನಮ್ಮ ಸಂಘಟನೆಯಿಂದ ಯಾವುದೇ ರೀತಿಯ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ,ಪ್ರಸ್ತುತ ಉಡುಪಿ ಜಿಲ್ಲೆಯಲ್ಲೆ ಮೊದಲ ಬಾರಿ ಚಾಲನೆಗೊಂಡ ಈ ಸಂಘಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ಸಂಪರ್ಕಿತ ಮನೆಯ ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸಲು ಕರೆನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯುತ್ ಕಾರ್ಮಿಕರಾದ ಬನ್ನಾಡಿ ಬಾಲಕೃಷ್ಣ ಶೆಟ್ಟಿ ಹಾಗೂ ಕೋಟದ ಮಹಾಬಲ ಆಚಾರ್ ಇವರುಗಳನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೋಟ ವಿದ್ಯುತ್ ಕಾರ್ಮಿಕರ ಸಂಘದ ಅಧ್ಯಕ್ಷ ಉಮೇಶ್ ಪೂಜಾರಿ ಕದ್ರಿಕಟ್ಟು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಮೆಸ್ಕಾಂ ಸಹಾಯಕ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ಉದ್ಯಮಿ ಕವಿತಾ ಸದಾನಂದ ಗಿಳಿಯಾರು,ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ,ವಿದ್ಯುತ್ ಗುತ್ತಿಗೆದಾರ ಸಂಘದ ಪ್ರಮುಖರಾದ ಗೋಪಾಲ್ ದೇವಾಡಿಗ,ಅಂಚೆ ಇಲಾಖೆ ಉಡುಪಿ ಇದರ ವಿಮಾ ವಿಭಾಗದ ಅಶ್ವಥ್ ,ಕೋಟ ಸಂಘದ ಕಾರ್ಯದರ್ಶಿ ರಾಜೇಶ್ ಹಂದಟ್ಟು, ಕೋಶಾಧಿಕಾರಿ ನಾಗೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಗೌರವ ಸಲಹೆಗಾರ ಚಂದ್ರ ಆಚಾರ್ ಪ್ರಾಸ್ತಾವನೆ ಸಲ್ಲಿಸಿದವರು.ಸದಸ್ಯ ಸುಧೀಂದ್ರ ಜೋಗಿ ಸ್ವಾಗತಿಸಿದರು. ಸನ್ಮಾನಪತ್ರವನ್ನು ಸದಸ್ಯ ಅಶ್ವಥ್ ಪೂಜಾರಿ ವಾಚಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಗಿರೀಶ್ ಗಾಣಿಗ ಬೆಟ್ಲಕ್ಕಿ ನಿರೂಪಿಸಿ ವಂದಿಸಿದರು.
ಕೋಟದ ನೂತನವಾಗಿ ಸಂಘಟಿತಗೊಂಡ ವಿದ್ಯುತ್ ಕಾರ್ಮಿಕರ ಸಂಘವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯುತ್ ಕಾರ್ಮಿಕರಾದ ಬನ್ನಾಡಿ ಬಾಲಕೃಷ್ಣ ಶೆಟ್ಟಿ ಹಾಗೂ ಕೋಟದ ಮಹಾಬಲ ಆಚಾರ್ ಇವರುಗಳನ್ನು ಸನ್ಮಾನಿಸಲಾಯಿತು. ಕೋಟ ಮೆಸ್ಕಾಂ ಸಹಾಯಕ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ಉದ್ಯಮಿ ಕವಿತಾ ಸದಾನಂದ ಗಿಳಿಯಾರು,ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ,ವಿದ್ಯುತ್ ಗುತ್ತಿಗೆದಾರ ಸಂಘದ ಪ್ರಮುಖರಾದ ಗೋಪಾಲ್ ದೇವಾಡಿಗ ಮತ್ತಿತರರು ಇದ್ದರು.