ಕೋಟ: ಶರನ್ನವರಾತ್ರಿಯ ಪ್ರಯುಕ್ತ ಅ.19 ರ ಗುರುವಾರ ಲಲಿತಾ ಪಂಚಮಿಯಂದು ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದಲ್ಲಿ ದೇವಳದ ಆಡಳಿತ ಮಂಡಳಿಯ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮವನ್ನು ನಡೆಸಲಾಯಿತು. ಶ್ರೀದೇವಳದ ತಂತ್ರಿಗಳಾದ ವೇ. ಮೂ. ಕೃಷ್ಣ ಸೋಮಯಾಜಿಯವರು ಪ್ರಧಾನ ಪೌರೋಹಿತ್ಯವನ್ನು ವಹಿಸಿದ್ದರು.
ಆಡಳಿತ ಮಂಡಳಿಯ ಸದಸ್ಯರಾದ ಬೆಂಗಳೂರಿನ ಎ . ವಿ. ಶ್ರೀಧರ ಕಾರಂತ ಮತ್ತು ದಂಪತಿ ಹೋಮದ ಯಜಮಾನತ್ವವನ್ನು ವಹಿಸಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷ ಡಾ ಕೆ. ಎಸ್ ಕಾರಂತ ದಂಪತಿ,ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ದಂಪತಿ, ಕೋಶಾಧಿಕಾರಿ ವೇ. ಮೂ. ಪರಶುರಾಮ ಭಟ್ಟ, ಸದಸ್ಯರಾದ ಕಾಟಿಪಳ್ಳ ಪಿ. ಸದಾಶಿವ ಐತಾಳ, ಶ್ರೀ ಮೀಯಪದವು ಶ್ರೀಧರ ರಾಯರು , ಕೂ. ಮ. ಜ. ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀಪತಿ ಅಧಿಕಾರಿ, ಚಿದಾನಂದ ತುಂಗ, ವಿವಿಧ ಅಂಗಸಂಸ್ಥೆಗಳ ಪ್ರತಿನಿಧಿಗಳು,ಗ್ರಾಮ ಮೊಕ್ತೇಸರರು ಮತ್ತು ಊರ ಪರವೂರ ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಲಿತಾ ಪಂಚಮಿಯಂದು ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದಲ್ಲಿ ದೇವಳದ ಆಡಳಿತ ಮಂಡಳಿಯ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮವನ್ನು ನಡೆಸಲಾಯಿತು.