ಕೋಟ: ಶಾಂತಮೂರ್ತಿ ಶ್ರೀ ಶನೀಶ್ವರ ಸ್ವಾಮಿ ಹಾಗೂ ಕನ್ನಿಕಾಪರಮೇಶ್ವರಿ ದೇವಸ್ದಾನ ಶ್ರೀ ಕ್ಷೇತ್ರ ಹಾಡಿಕೆರೆ ಬೆಟ್ಟು ಕೋಟ ಇಲ್ಲಿ ಸುಮಾರು ಒಂದುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಭೋಜನಾ ಶಾಲೆ ಹಾಗೂ ಸಭಾಭವನದ ಶಿಲಾನ್ಯಾಸವನ್ನು ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ನೆರವೆರಿಸಿದರು. ಧಾರ್ಮಿಕ ವಿಧಿವಿಧಾನವನ್ನು ವೇದಮೂರ್ತಿ ಜನಾರ್ದನ ಅಡಿಗ ಇವರ ನೇತೃತ್ವದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಕ್ಷೇತ್ರದ ಪಾತ್ರಿ ಭಾಸ್ಕರ ಸ್ವಾಮಿ, ಕೋಟ ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಕೋಟ,ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ,ಸದಸ್ಯರಾದ ಶೇಖರ್ ಗಿಳಿಯಾರು, ಹಾಗೂ ಭಕ್ತಾದಿಗಳು ಸ್ದಳೀಯರು ಉಪಸ್ದಿತರಿದ್ದರು.
ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ಸ್ವಾಮಿ ದೇಗುಲದ ಭೋಜನಾ ಶಾಲೆ ಹಾಗೂ ಸಭಾಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.