• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮಾಬುಕಳ- ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾಟದ ಸಮಾರೋಪ

ByKiran Poojary

Oct 21, 2023

ಕೋಟ: ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿ ಮೈಸೂರು ವಿಭಾಗ ಮಟ್ಟದ 14/ 17 ವರ್ಷ ವಯೋಮಾನದ ಬಾಲಕ ಬಾಲಕಿಯರ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭವು ಚೇತನ ಪ್ರೌಢಶಾಲೆಯ ಬಿ. ಡಿ .ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್.ಇಬ್ರಾಹಿಂ ಸಾಹೇಬ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಕುಂದಾಪುರದ ಶಾಸಕ ಕಿರಣ್ ಕೊಡ್ಗಿ ವಿಜೇತ ತಂಡಗಳಿಗೆ ಟ್ರೋಫಿಯನ್ನು ವಿತರಿಸಿ ಶುಭ ಹಾರೈಸಿದರು. ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಅಥ್ಲೆಟಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಶಶಿಧರ್ ಶೆಟ್ಟಿ ಮಡಮಕ್ಕಿ , ಎಸ್‍ಎಮ್‍ಎಸ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಲನ್ ರೋಹನ್ ವಾಜ್, ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಗೋಪಾಲ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಥ್ಲೆಟಿಕ್ ಅಸೋಸಿಯೇಷನ್ ಸಂಚಾಲಕ ಆರೂರು ತಿಮ್ಮಪ್ಪ ಶೆಟ್ಟಿ, , ಬ್ರಹ್ಮಾವರದ ಎಸ್‍ಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಐವನ್ ಡೋನಾತ್ ಸುವಾರಿಸ್, ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಪ್ರಮುಖ ವಿಜಯ ಆಳ್ವ ಬೆಳ್ಳಿಪಾಡಿ ಮುಂತಾದವರು ಉಪಸ್ಥಿತರಿದ್ದರು .ಚೇತನ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಿ ಭರತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು .ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ ಶೆಟ್ಟಿ ವಿಜೇತರ ಪಟ್ಟಿಯನ್ನು ವಾಚಿಸಿದರು .ಚೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಕಲ್ಪನಾ ಶೆಟ್ಟಿ ಧನ್ಯವಾದಗೈದರು. ವಿಶ್ರಾಂತ ಮುಖ್ಯ ಶಿಕ್ಷಕ ಗಣೇಶ್.ಜಿ ಕಾರ್ಯಕ್ರಮ ನಿರೂಪಿಸಿದರು.

ಮೈಸೂರು ವಿಭಾಗ ಮಟ್ಟದ 14 ವರ್ಷ ವಯೊಮಾನದ ಬಾಲಕರ ವಿಭಾಗದಲ್ಲಿ ಉಡುಪಿ ತಂಡವು ಪ್ರಥಮ ಸ್ಥಾನವನ್ನು , ಮೈಸೂರು ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. 17 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಮೈಸೂರು ತಂಡವು ಪ್ರಥಮ ಸ್ಥಾನವನ್ನು,ಉಡುಪಿ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. 17 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಉಡುಪಿ ತಂಡವು ಪ್ರಥಮ ಸ್ಥಾನವನ್ನು ,ದಕ್ಷಿಣ ಕನ್ನಡ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. 14 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಉಡುಪಿ ತಂಡ ನೇರವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು.

ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿ ಮೈಸೂರು ವಿಭಾಗ ಮಟ್ಟದ 14/ 17 ವರ್ಷ ವಯೋಮಾನದ ಬಾಲಕ ಬಾಲಕಿಯರ ಕ್ರಿಕೆಟ್ ಪಂದ್ಯಾಟದಲ್ಲಿ 14 ವರ್ಷ ವಯೊಮಾನದ ಬಾಲಕರ ವಿಭಾಗದಲ್ಲಿ ಉಡುಪಿ ತಂಡವು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಮುಡಿಗೆರಿಸಿಕೊಂಡಿತು.

Leave a Reply

Your email address will not be published. Required fields are marked *