Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯುಪಿಎಂಸಿ – ಕವಿಗೋಷ್ಠಿ ಸಂಪನ್ನ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಅಕ್ಟೋಬರ್ 21 ರಂದು ಕನ್ನಡ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಉಡುಪಿ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯು ಉದ್ಘಾಟನೆಗೊಂಡು, ಕವಿಗೋಷ್ಠಿಯೊಂದಿಗೆ ಸಂಪನ್ನಗೊಂಡಿತು.

ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾಕುಮಾರಿ ಉದ್ಘಾಟಿಸಿ ಕಲೆ, ಸಾಹಿತ್ಯ, ಸಂಗೀತ, ಕಾವ್ಯ, ನಾಟಕ ಇವುಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಓದಿನಲ್ಲಿ ಏಕಾಗ್ರತೆ ಮತ್ತು ಶ್ರದ್ಧೆ ಮೂಡುತ್ತದೆ ಎಂದು ತಿಳಿಸಿದರು. ಕ.ಸಾ.ಪ ಉಡುಪಿ ಜಿಲ್ಲೆಯ ಕೋಶಾಧ್ಯಕ್ಷರಾದ ಶ್ರೀ ಮನೋಹರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಉಡುಪಿ ತಾಲ್ಲೂಕಿನ ಕ.ಸಾ.ಪ ಅಧ್ಯಕ್ಷ ಹಾಗೂ ಕಾಲೇಜು ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀ ರವಿರಾಜ್ ಹೆಚ್.ಪಿ ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಥೆ, ಕವನಗಳನ್ನು ರಚಿಸಲು ಒಲವು ತೋರಿದ್ದಲ್ಲಿ ಮುಂದೆ ಸಾಮಾಜಿಕ ವೇದಿಕೆಯಲ್ಲಿ ಉತ್ತಮ ಕವಿ ಮತ್ತು ಲೇಖಕರಾಗಿ ಮೂಡಿಬರಲು ಸಾಧ್ಯ ಎಂದು ತಿಳಿಸಿದರು.

ಹಿರಿಯಡ್ಕದ ಕವಯಿತ್ರಿ ಶ್ರೀಮತಿ ಪೂರ್ಣಿಮಾ ಸುರೇಶ್ ಕವಿಗೋಷ್ಠಿಯ ಆಶಯ ಭಾಷಣದಲ್ಲಿ ಕವಿತೆಯ ಮೂಲಕ ಭಾವನೆಗಳನ್ನು ಪ್ರಕಟ ಮಾಡುವವರು ಕವಿಗಳು, ಬಾಲ್ಯದಿಂದ ಮುಪ್ಪಿನವರೆಗೆ ಅನುಭವಿಸುವ ಅನುಭವಗಳನ್ನು ಕಾವ್ಯದಲ್ಲಿ ಬಿತ್ತರಿಸುತ್ತದೆ, ಒಳನೋಟ ಕಾಣಲು ನಮ್ಮಲ್ಲಿ ಭಾವನೆಗಳು ಬೇಕು ಎಂದು ನುಡಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಹಾಗೂ ರಂಗನಟ ಶ್ರೀ ರಾಜೇಶ್ ಭಟ್ ಪಣಿಯಾಡಿ ವಹಿಸಿಕೊಂಡು ಯುಪಿಎಂಸಿ ಕೇವಲ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಶಿಕ್ಷಣ ನೀಡುತ್ತಿದ್ದರೂ ಇಲ್ಲಿನ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಯನ್ನು ಶ್ಲಾಘಸಿ, ಕವಿತೆ ಹುಟ್ಟಲು ಜಾಗ, ಪ್ರಕೃತಿ, ಏಕಾಂತ, ನೋವು, ರೋಷ, ಭಾವಾ ಬೇಕಾಗುತ್ತದೆ, ಭಾವನೆಗಳನ್ನು ಬಿತ್ತರಿಸಲು ಕವಿತೆ ಸಾಧನಾ ಎಂದು ತಿಳಿಸಿದರು. ಸಾಹಿತಿ ಶ್ರೀ ನಾರಾಯಣ ಮಡಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪ್ರೇಮಸಾಯಿ, ಕಾವ್ಯ ಶೆಟ್ಟಿ, ರಕ್ಷಿತಾ, ಆಶಿಕಾ, ಸ್ನೇಹಾ, ಸಿಂಚನಾ, ಅದೀಶಾ, ಕೃತಿಕಾ, ನಂದೀಶ್ ಕವನಗಳನ್ನು ರಚಿಸಿ ವಾಚಿಸಿದರು. ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ್ ಶೆಟ್ಟಿ ಸ್ವಾಗತಿಸಿದರು, ಕವಿಗೋಷ್ಠಿಯ ಸಂಚಾಲಕ ರಾಘವೇಂದ್ರ ಜಿ.ಜಿ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಸಭಾ ಕಾರ್ಯಕ್ರಮವನ್ನು ಹಾಗೂ ಕ.ಸಾ.ಪ ಉಡುಪಿ ತಾಲ್ಲೂಕಿನ ಗೌರವ ಕಾರ್ಯದರ್ಶಿ ಶ್ರೀ ಜನಾರ್ದನ ಕೊಡವೂರು ಕವಿಗೋಷ್ಠಿಯನ್ನು ನಿರೂಪಿಸಿ, ನಿರ್ವಹಿಸಿದರು.

Leave a Reply

Your email address will not be published. Required fields are marked *