ಛತ್ತೀಸ್‍ಗಢದ ವಿಧಾನಸಭಾ ಚುನಾವಣೆಗೂ ಮುನ್ನ ಬಂಡಾಯ ಪೀಡಿತ ಮೊಹ್ಲಾ-ಮಾನ್‍ಪುರ್-ಅಂಬಗಢ ಚೌಕಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೀಡಾದ ಬಿಜೆಪಿ ಮುಖಂಡ ಬಿರ್ಜು ತಾರಾಮ್ (53), ಪಕ್ಷದ ರೈತ ವಿಭಾಗದ ಉಪಾಧ್ಯಕ್ಷರಾಗಿದ್ದರು.
ಇನ್ನು ಈ ಹಿಂದೆ ಮನ್‍ಪುರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೊಲೆಯಲ್ಲಿ ಮಾವೋವಾದಿಗಳು ಹಾಗೂ ಸ್ಥಳೀಯ ಗಲಭೆಕೋರರು ಭಾಗಿಯಾಗಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.