ಮೂಡಬಿದ್ರೆ ಪ್ರದೇಶದಲ್ಲಿ ಹಟ್ಟಿಯಿಂದಲೇ ಗೋ ಕಳ್ಳತನವಾಗಿದ್ದು, ಅಕ್ರಮ ಗೋ ಸಾಗಾಟದ ಬಗ್ಗೆ ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು ವತಿಯಿಂದ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮೂಡಬಿದ್ರೆ ತಾಲೂಕಿನ ಹಿಂದೂ ಜಾಗರಣ ವೇದಿಕೆಯು ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ ಗೋಸಾಗಾಟ ಮತ್ತು ಅಕ್ರಮ ಕಸಾಯಿಖಾನೆಯಲ್ಲಿ ಗೋವುಗಳನ್ನು ವದಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಹಿಂದು ಸಮಾಜವೇ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲು ರಸ್ತೆಗೆ ಇಳಿಯಲಿದೆ ಎಂದು ಈ ಮೂಲಕ ಮೂಡಬಿದ್ರೆ ಪೆÇಲೀಸ್ ಠಾಣೆಗೆ ದೂರು ನೀಡಿದರು.
ಈಗಾಗಲೇ ಪುತ್ತಿಗೆ ಹಾಗೂ ಮೂಡಬಿದ್ರೆ ಪ್ರದೇಶದಲ್ಲಿ ಹಲವಾರು ಗೋವುಗಳು ಕಾಣೆಯಾಗಿದ್ದು, ಮೂಡಬಿದ್ರೆ ಪರಿಸರದಲ್ಲಿ ಅಲ್ಲಲ್ಲಿ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತಿರುವ ವಿಚಾರವು ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿ ಅಕ್ರಮ ಗೋವುಗಳ ಕಳ್ಳಸಾಗಾಣಿಗೆ ಮತ್ತು ಅಕ್ರಮ ಕಸಾಯಿಖಾನೆ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಬೇಕು. ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರಗುಡ, ತಾಲೂಕು ಸಂಯೋಜಕ ಸಂದೀಪ್ ಹೆಗ್ಡೆ ಹಾಗೂ ಪ್ರಮುಖರಾದ ಅನೂಜ್ ಭಂಡಾರಿ, ನಿತೇಶ್ ಎಸ್ ಪೂಜಾರಿ ಉಪಸ್ಥಿತರಿದ್ದರು.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180