News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರೀತಿಸಿ ಮದುವೆಯಾದ ವ್ಯಕ್ತಿಯಿಂದಲೇ ಮಹಿಳಾ ಪೊಲೀಸ್ ಹತ್ಯೆ; ಸಿಂಧೂರ ಅಳಿಸಿ, ಶವ ಬೆತ್ತಲೆಗೊಳಿಸಿದ ಕ್ರೂರಿ.!

ಪತಿಯಿಂದಲೇ ಪತ್ನಿಯ ಕ್ರೂರವಾಗಿ ಹತ್ಯೆಯಾದ ಘಟನೆ ದೂರದ ಪಾಟ್ನಾ ನಗರದಲ್ಲಿ ನಡೆದಿದೆ. ಪತಿ ಗಜೇಂದ್ರ ಯಾದವ್ ಎಂಬಾತ ಇತ್ತೀಚೆಗೆ ಪಾಟ್ನಾದ ಮಹಿಳಾ ಕಾನ್‍ಸ್ಟೆಬಲ್ ಆಗಿ ನೇಮಕವಾಗಿದ್ದ ಪತ್ನಿ ಶೋಭಾ ಕುಮಾರಿ (23) ಯನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪಿ. ಪತ್ನಿ ಕಾನ್‍ಸ್ಟೆಬಲ್ ಆಗಿ ನೇಮಕವಾಗಿದ್ದ ನಂತರ ತನ್ನ ಕುಟುಂಬಸ್ಥರೊಂದಿಗೆ ಹೆಚ್ಚು ಸಮಯ ಕಳೆಯುತ್ತಿರಲ್ಲಿಲ್ಲ ಎಂಬ ವಾದ ಪತಿಯದ್ದಾಗಿದೆ.

ಹತ್ಯೆ ಮಾಡಿದ ನಂತರ ಆರೋಪಿ ಪತಿ ಪತ್ನಿಯ ಶವವನ್ನು ಬೆತ್ತಲೆಗೊಳಿಸಿ, ಆಕೆಯ ಸಿಂಧೂರವನ್ನು ಅಳಿಸಿ, ರೂಮಿನಲ್ಲಿ ಬಿಸಾಡಿ ಹೋಗಿದ್ದಾನೆ. ಕೊಲೆಯಾದ ಶೋಭಾ ಅವರ ಶವ ಪಾಟ್ನಾದ ಹೋಟೆಲ್ ರೂಮಿನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡಿದ ನಂತರ ಪತಿ, ಆಕೆಯ ಮೈಮೇಲಿದ್ದ ಬಟ್ಟೆಗಳನ್ನು ಕಳಚಿ ಹಾಕಿದ್ದಾನೆಂದು ಹೇಳಲಾಗುತ್ತಿದೆ. ಇಡೀ ರೂಮಿನ ತುಂಬ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಆರೋಪಿ ಶೋಭಾ ಅವರ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಕೊಲೆಯಾಗುವ 2 ದಿನಗಳ ಹಿಂದೆಯೇ ಶೋಭಾಳ ಪತಿ ಆ ರೂಮನ್ನು ಬುಕ್ ಮಾಡಿದ್ದರು. ಶೋಭಾ ಅವರನ್ನು ಭೇಟಿ ಮಾಡಲು ಬಂದಿದ್ದರು. ಕೊಲೆಯ ನಂತರ ಪತಿ ತನ್ನ ಫೋನ್ ಸ್ವಿಚ್ ಆಫ್ ಮಾಡುವ ಮೊದಲು 3 ಕರೆಗಳನ್ನು ಮಾಡಿದ್ದ ಎನ್ನಲಾಗಿದೆ. ಆತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಕೊಲೆಯಾದ ಶೋಭಾ ಮತ್ತು ಆಕೆಯ ಪತಿ ಮೊದಲು ಜೆಹಾನಾಬಾದ್‍ನಲ್ಲಿ ನಡೆಸುತ್ತಿದ್ದ ಕೋಚಿಂಗ್ ತರಗತಿಯಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರಿಗೂ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯನ್ನೂ ಆಗಿದ್ದರು. ದಂಪತಿಗಳಿಗೆ ಓರ್ವ ಮಗಳಿದ್ದಾಳೆ. (ಎಜೇನ್ಸಿಸ್)

Leave a Reply

Your email address will not be published. Required fields are marked *