ಸಿರುಗುಪ್ಪ : ನಗರದ ಮತ್ತು ತಾಲ್ಲೂಕಿನ ವಿವಿಧ ಕಡೆಗಳ ಪಟಾಕಿ ಅಂಗಡಿ ಮತ್ತು ಗೋದಾಮುಗಳ ಮೇಲೆ ಪೊಲೀಸ್‍ರು ದಾಳಿ ನಡೆಸಿ 1.41 ಕೋಟಿ (ಎಂಆರ್‍ಪಿ) ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಬಂಡಾರು ಆದೇಶದ ಮೇರೆಗೆ ಡಿವೈಎಸ್ಪಿ ಎಸ್.ಟಿ.ಒಡೆಯರ್ ಮಾರ್ಗದರ್ಶನದಲ್ಲಿ ಪ್ರೋಬೇಷನರಿ ಡಿವೈಎಸ್ಪಿ ಉಮಾರಾಣಿ ನೇತೃತ್ವದಲ್ಲಿ ಸಿರುಗುಪ್ಪ ತಾಲ್ಲೂಕಿನ ವಿವಿಧ ಕಡೆ ನಡೆದ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿರುಗುಪ್ಪ ನಗರದ ಹಳೇ ಎಸ್.ಬಿ.ಐ, ಎದುರುಗಡೆ ಇರುವ ಅಂಗಡಿಯಲ್ಲಿ 2,50,000/- ಎಪಿಎಂಸಿ ಆವರಣದ ಗೋದಾಮಿನಲಿ 6 ಲಕ್ಷ, ಪ್ಯಾಟೆ ಆಂಜನೇಯಸ್ವಾಮಿ ಗುಡಿ ಹತ್ತಿರ 1.85 ಲಕ್ಷ, ಬಸ್‍ನಿಲ್ದಾಣದ ಹತ್ತಿರ ಪಾರ್ವತಿ ಏಜೆನ್ಸಿ ಗೋದಾಮಿನಲ್ಲಿ 33.61 ಲಕ್ಷ, ತೆಕ್ಕಲಕೋಟೆಯ ಡಿ.ಸಣ್ಣ ಶೇಕಣ್ಮನ ಮಳಿಗೆಯಲ್ಲಿ 1,62,250/- ಸಿರಿಗೇರಿಯ ನಾಗನಾಥ ದೇವಸ್ಥಾನದ ಹತ್ತಿರ 9,245/-, ಸಿರಿಗೇರಿಯ ಮರೇಗೌಡರ ಮಳಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ 35,540/- ಮೌಲ್ಯದ ಪಟಾಕಿಗಳನ್ನು ತಾಲೂಕಿನ ಸಿರುಗುಪ್ಪ, ಸಿರಿಗೇರಿ, ತೆಕ್ಕಲಕೋಟೆ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡು ಪುಕರಣ ದಾಖಲಿಸಿದ್ದಾರೆ.