ಹುಬ್ಬಳ್ಳಿ: ತಾಲ್ಲೂಕಿನ ನೂಲ್ಕಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸಾರಾಯಿ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿ ಮೂವರು ಮೇಲೆ ಪುಕರಣ ದಾಖಲು ಮಾಡಿದ್ದಾರೆ.
ನೂಲ್ಕಿ ಗ್ರಾಮದ ರಘು, ಈರಪ್ಪ ಹಾಗೂ ಮಂಜುನಾಥ ಎಂಬುವರು ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಸಾವಜಿ ಹೋಟೆಲ್ ನಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾಗ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 86 ಮದ್ಯ ಬಾಟಲ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧಿತ ಆರೋಪಿಗಳ ಪೈಕಿ ಮಂಜುನಾಥ ಎಂಬಾತ ಪರಾರಿಯಾಗಿದ್ದು, ಮೂವರ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಇಬ್ಬರನ್ನು ಜೈಲಿಗೆ ಅಟ್ಟಿದ್ದು, ಪರಾರಿಯಾದ ಮಂಜುನಾಥನ ಪತ್ತೆಗೆ ಜಾಲ ಬೀಸಿದ್ದಾರೆ.