ದೇವನಹಳ್ಳಿ : ರವಿಕೆಯಲ್ಲಿ ಮರೆಮಾಚಿ ಪೇಸ್ಟ್ ರೂಪದಲ್ಲಿ ಚಿನ್ನ ಗುದನಾಳದಲ್ಲಿ ಅಡಗಿಸಿಟ್ಟು ಚಿನ್ನ ಸಾಗಣೆ ಮತ್ತು ಡ್ರೈಫೂಟ್ ನಲ್ಲಿ ಮರೆಮಾಚಿ ಚಿನ್ನ ಸಾಗಿಸುವ ಯತ್ನ ನಡೆಸುತ್ತಿದ್ದ ಮೂವರು ಪುಯಾಣಿಕರನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಆರೋಪಿಗಳಿಂದ 67 ಲಕ್ಷ ಮೌಲ್ಯದ 1 ಕೆಜಿಗೂ ಅಧಿಕ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಫೈಟ್ ನಂ ಎಕೆ- 053ಯಲ್ಲಿ ಕೌಲಾಲಂಪುರದಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆಯನ್ನ ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ, ಆಕೆ ಧರಿಸಿದ್ದ ರವಿಕೆಯೊಳಗೆ ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದೆ.
ಆಕೆಯಿಂದ 17.9 ಲಕ್ಷ ರೂಪಾಯಿ ಮೌಲ್ಯದ 300.95 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಇನ್ನು, ಅದೇ ಫೈಟ್‍ನಲ್ಲಿ ಬಂದ ಮಹಿಳೆಯನ್ನ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಆಕೆಯ ಗುದನಾಳದಲ್ಲಿ ಅಡಗಿಸಿಟ್ಟು ಪೇಸ್ಟ್ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದು, ಆಕೆಯಿಂದ 34.4 ಲಕ್ಷ ರೂಪಾಯಿ ಮೌಲ್ಯದ 578.27 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.ಗಲ್ಫ್ ಏರ್ ಫೈಟ್ ಉಈ 282 ಮೂಲಕ ಕುವೈತ್‍ನಿಂದ ಬಂದ ಭಾರತೀಯ ಮೂಲದ ಪುಯಾಣಿಕರನ್ನ ತಪಾಸಣೆ ನಡೆಸಿದ್ದಾಗ, ಡ್ರೈಫ್ರುಟ್ ಪ್ಯಾಕೆಟ್‍ನಲ್ಲಿ ಚಿನ್ನದ ತುಂಡುಗಳು ಪತ್ತೆಯಾಗಿವೆ. 40 ಚಿನ್ನದ ತುಂಡುಗಳು ಸಿಕ್ಕಿದ್ದು, 254 ಗ್ರಾಂದ ತೂಕದ 15,26,565 ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.