
ನವರಾತ್ರಿ ಉತ್ಸವದ ಕೊನೆಯ ದಿನ ವಿಜಯ ದಶಮಿಯಂದು ಮಂಗಳವಾರ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರ ಪಡುಕೇರಿ-ಕುಂದಾಪುರ ಇಲ್ಲಿ ಚಂಡಿಕಾಯಾಗ ನಡೆಯಿತು.
ಮಧ್ಯಾಹ್ನ ಶ್ರೀ ಕ್ಷೇತ್ರದ ಶ್ರೀ ಮಹಾಂಕಾಳಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ , ಶ್ರೀ ದೇವಿ ದರ್ಶನ, ನಂತರ “ಸಾರ್ವಜನಿಕ ಅನ್ನಸಂತರ್ಪಣೆ” ಕಾರ್ಯಕ್ರಮ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರದ ವತಿಯಿಂದ ನೆರವೇರಿತು.
ವೇ.ಮೂ. ಪ್ರಸಾದ್ ಭಟ್ ರಾಯಪ್ಪನ ಮಠ ವಡೇರಹೋಬಳಿ-ಕುಂದಾಪುರ ಮತ್ತು ಸಂಗಡಿಗರಿಂದ ಚಂಡಿಕಾ ಹೋಮದ ಧಾರ್ಮಿಕ ವಿಧಿ ವಿಧಾನಗಳು ಜರುಗಿತು. ಈ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರದ ಧರ್ಮದರ್ಶಿಗಳು, ಉತ್ಸವ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಭಕ್ತಾಧಿಗಳು ಉಪಸ್ಥಿತರಿದ್ದರು.
Leave a Reply