• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ವಿಜಯ ದಶಮಿಯಂದು ಶ್ರೀಆದಿಶಕ್ತಿ ಕಾಳೀ ಕ್ಷೇತ್ರ ಪಡುಕೇರಿಯಲ್ಲಿ ಚಂಡಿಕಾಯಾಗ

ByKiran Poojary

Oct 24, 2023

ನವರಾತ್ರಿ ಉತ್ಸವದ ಕೊನೆಯ ದಿನ ವಿಜಯ ದಶಮಿಯಂದು ಮಂಗಳವಾರ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರ ಪಡುಕೇರಿ-ಕುಂದಾಪುರ ಇಲ್ಲಿ ಚಂಡಿಕಾಯಾಗ ನಡೆಯಿತು.

ಮಧ್ಯಾಹ್ನ ಶ್ರೀ ಕ್ಷೇತ್ರದ ಶ್ರೀ ಮಹಾಂಕಾಳಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ , ಶ್ರೀ ದೇವಿ ದರ್ಶನ, ನಂತರ “ಸಾರ್ವಜನಿಕ ಅನ್ನಸಂತರ್ಪಣೆ” ಕಾರ್ಯಕ್ರಮ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರದ ವತಿಯಿಂದ ನೆರವೇರಿತು. ‌

ವೇ.ಮೂ. ಪ್ರಸಾದ್ ಭಟ್ ರಾಯಪ್ಪನ ಮಠ ವಡೇರಹೋಬಳಿ-ಕುಂದಾಪುರ ಮತ್ತು ಸಂಗಡಿಗರಿಂದ ಚಂಡಿಕಾ ಹೋಮದ ಧಾರ್ಮಿಕ ವಿಧಿ ವಿಧಾನಗಳು ಜರುಗಿತು. ಈ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರದ ಧರ್ಮದರ್ಶಿಗಳು, ಉತ್ಸವ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *